ನವದೆಹಲಿ(ಫೆ.20): ಭಾರತ ಹಾಗೂ ರಾಜ್ಯ ರಣಜಿ ತಂಡಗಳ ನಡುವೆ ಇರುವ ಫಿಟ್ನೆಸ್‌ ಅಂತರವನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದೆ. ಇನ್ಮುಂದೆ ರಾಜ್ಯ ತಂಡಗಳು ಸಹ ಭಾರತ ತಂಡದ ಫಿಟ್ನೆಸ್‌ ನಿಯಮಗಳನ್ನು ಪಾಲಿಸಬೇಕು ಎನ್ನುವ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಇದನ್ನೂ ಓದಿ:  ಕ್ರಿಕೆಟಿಗರ ಯೋ-ಯೋ ಫಿಟ್ನೆಸ್ ಟೆಸ್ಟ್ ಅಂದ್ರೇನು?

ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ರಾಜ್ಯ ತಂಡಗಳ ಟ್ರೈನರ್‌ಗಳಿಗೆ ಭಾರತದ ತಂಡದ ಟ್ರೈನರ್‌ ಶಂಕರ್‌ ಕಾರ್ಯಾಗಾರ ನಡೆಸಿದರು. ಭಾರತ ಕಿರಿಯರ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌, ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಸಹ ಕಾರ್ಯಾಗಾರದ ವೇಳೆ ಉಪಸ್ಥಿತರಿದ್ದರು. 

ಇದನ್ನೂ ಓದಿ: ಯೋ-ಯೋ ಟೆಸ್ಟ್ ಪಾಸ್ ಮಾಡಿದ ಗೌತಮ್ ಗಂಭೀರ್ ಪುತ್ರಿ!

ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಕಡ್ಡಾಯವಾಗಿ ಯೋ-ಯೋ ಟೆಸ್ಟ್‌ನಲ್ಲಿ ಉತ್ತೀರ್‍ಣರಾಗಬೇಕಿದೆ. ಈ ನಿಯಮವನ್ನು ಬಿಸಿಸಿಐ ಸದ್ಯದಲ್ಲೇ ರಣಜಿ ತಂಡಗಳಿಗೂ ವಿಸ್ತರಿಸಲಿದೆ ಎನ್ನಲಾಗಿದೆ.