ಯೋ-ಯೋ ಟೆಸ್ಟ್ ಪಾಸ್ ಮಾಡಿದ ಗೌತಮ್ ಗಂಭೀರ್ ಪುತ್ರಿ!

First Published 22, Jul 2018, 8:52 PM IST
Watch Gautam Gambhir’s Daughter Clears Yo-Yo Test With Ease
Highlights

ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್ ಶಬ್ದ ಕೇಳಿದರೆ ಬೆಚ್ಚಿ ಬೀಳ್ತಾರೆ. ಕಾರಣ ಟೀಂ ಇಂಡಿಯಾಗೆ ಆಯ್ಕೆಯಾಗಲು ಈಗ ಯೋ-ಯೋ ಟೆಸ್ಟ್ ಪಾಸ್ ಆಗಲೇಬೇಕು. ಇದಲ್ಲಿ ಕೆಲ ಕ್ರಿಕೆಟಿಗರು ವೈಫಲ್ಯ ಅನುಭವಿಸಿ, ತಂಡದಿಂದಲೇ ಹೊರಬಿದ್ದಿದ್ದಾರೆ. ಇಂತಹ ಕಠಿಣ ಪರೀಕ್ಷೆಯನ್ನ ಗೌತಮಮ್ ಗಂಭೀರ್ ಪುತ್ರಿ ಪಾಸ್ ಮಾಡಿದ್ದಾಳೆ. ಇಲ್ಲಿದೆ ನೋಡಿ.

ದೆಹಲಿ(ಜು.22): ಟೀಂ ಇಂಡಿಯಾಗೆ ಆಯ್ಕೆಯಾಗಬೇಕಾದರೆ ಈಗ ಯೋ-ಯೋ ಪರೀಕ್ಷೆ ಪಾಸ್ ಆಗಲೇಬೇಕು. ಇತ್ತೀಚೆಗೆ ಯೋ-ಯೋ ಟೆಸ್ಟ್ ಭಾರಿ ಸದ್ದು ಮಾಡಿತ್ತು. ಈ ಕುರಿತು ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.

ಯೋ-ಯೋ ಟೆಸ್ಟ್ ಪಾಸ್ ಮಾಡಿದರೆ ಮಾತ್ರ ಟೀಂ ಇಂಡಿಯಾದಲ್ಲಿ ಸ್ಥಾನ. ಹೀಗಾಗಿ ಫಿಟ್ನೆಸ್ ತುಂಬಾ ಮುಖ್ಯ. ದೈಹಿಕವಾಗಿ ಫಿಟ್ ಆಗಿಲ್ಲದಿದ್ದರೆ, ಯೋ-ಯೋ ಟೆಸ್ಟ್ ಫಾಸ್ ಮಾಡೋದು ಸುಲುಭವಲ್ಲ.  ಹಲವು ಕ್ರಿಕೆಟಿಗರು ವೈಫಲ್ಯ ಅನುಭವಿಸಿದ ಯೋ-ಯೋ ಪರೀಕ್ಷೆಯನ್ನ ಇದೀಗ ಟೀಂ ಇಂಡಿಯಾ ಕ್ರಿಕೆಟರ್ ಗೌತಮ್ ಗಂಭೀರ್ ಪುತ್ರಿ ಪಾಸ್ ಮಾಡಿದ್ದಾಳೆ.

 

 

ಟೀಂ ಇಂಡಿಯಾ ಡ್ಯಾಶಿಂಗ್ ಒಪನರ್ ಗೌತಮ್ ಗಂಭೀರ್ ಟ್ವಿಟರ್‌ನಲ್ಲಿ ಪುತ್ರಿ ಯೋ-ಯೋ ಪರೀಕ್ಷೆ ವೀಡಿಯೋ ಪೋಸ್ಟ್ ಮಾಡಿದ್ದಾರೆ.  ಇಷ್ಟೇ ಅಲ್ಲ, ಪುತ್ರಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದಾಳೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್‌ಗೆ ಹೆಸರು ಪ್ರಸ್ತಾಪಿಸಿ ನಿಮ್ಮ ಫಿಟ್ನೆಸ್ ಟೆಸ್ಟ್ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.   

loader