ಸಂಜು ಫಿಟ್ನೆಸ್ ಪರೀಕ್ಷೆ ಫೇಲಾಗಲು ಕಾರಣವೇನು? ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?

sports | Tuesday, June 12th, 2018
Suvarna Web Desk
Highlights

ಇನ್ನು ಸಂಜು ಗಾಯಗೊಂಡಿರುವ ಅಂಶ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಅಧಿಕಾರಿಗಳಿಗೂ ತಿಳಿದಿತ್ತು, ಬಿಸಿಸಿಐ ಗಮನಕ್ಕೂ ಬಂದಿತ್ತು. ಆದಾಗ್ಯೂ ಸಂಜು, ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ಯೋ-ಯೋ ಟೆಸ್ಟ್ ಎಷ್ಟು ಗಂಭೀರ ಮಾನದಂಡವಾಗಿದೆ ಎಂದು ಆಟಗಾರರಿಗೆ ಬಿಸಿಸಿಐ ನೇರವಾಗಿ ತಿಳಿಸಿದೆ.

ಬೆಂಗಳೂರು[ಜೂ.12]: 2018ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಥಿರ ಪ್ರದರ್ಶನ ತೋರಿದ್ದ ಬಿಸಿಸಿಐ ಆಯೋಜಿಸಿದ್ದ ಯೋ ಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದಾರೆ. ಸಂಜು ಸ್ಯಾಮ್ಸನ್ ಆಡಿದ 15 ಪಂದ್ಯಗಳಲ್ಲಿ 441 ರನ್ ಸಿಡಿಸಿ ಗಮನ ಸೆಳೆದಿದ್ದರು. 

ಸಂಜು ಸ್ಯಾಮ್ಸನ್‌ಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಇದರಿಂದ ಅವರು ಸೂಕ್ತ ತರಬೇತಿ ಪಡೆಯಲು ಸಾಧ್ಯ್ಯವಾಗಿರಲಿಲ್ಲ. ಇದೇ ಕಾರಣಕ್ಕಾಗಿ ಅವರು ಯೋ-ಯೋ ಟೆಸ್ಟ್‌ನಲ್ಲಿ ಉತ್ತಮ  ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. 
ಇನ್ನು ಸಂಜು ಗಾಯಗೊಂಡಿರುವ ಅಂಶ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಅಧಿಕಾರಿಗಳಿಗೂ ತಿಳಿದಿತ್ತು, ಬಿಸಿಸಿಐ ಗಮನಕ್ಕೂ ಬಂದಿತ್ತು. ಆದಾಗ್ಯೂ ಸಂಜು, ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ಯೋ-ಯೋ ಟೆಸ್ಟ್ ಎಷ್ಟು ಗಂಭೀರ ಮಾನದಂಡವಾಗಿದೆ ಎಂದು ಆಟಗಾರರಿಗೆ ಬಿಸಿಸಿಐ ನೇರವಾಗಿ ತಿಳಿಸಿದೆ.

ಇದನ್ನೂ ಓದಿ: ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!

ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?
ಕ್ರಮಬದ್ಧ ಮತ್ತು ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ನಿರೂಪಿಸುವುದೇ ಯೋ ಯೋ ಫಿಟ್ನೆಸ್. 20 ಮೀ. ಅಳತೆಯಲ್ಲಿ 2 ಕೋನ್‌ಗಳನ್ನು ನೇರ ಲೈನ್‌ನ ಒಳಗೆ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್‌ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್‌ನ ಅಂತರದಲ್ಲಿ ಇಟ್ಟ ಕೋನ್‌ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತುವರಿಯಬೇಕು. ಒಟ್ಟು 3 ಬೀಪ್ ಧ್ವನಿಗಳ ಅಂತರದಲ್ಲಿ ಸುತ್ತಬೇಕು. ಇವು ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್‌ನ ಸೂಚನೆ ಆಗಿರುತ್ತವೆ. ಪ್ರತಿ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಗಳ ನಡುವಿನ ಅಂತರ ಕಡಿಮೆ ಆಗುತ್ತಿರುತ್ತದೆ. 2 ಬಾರಿ ಬೀಪ್ ಸಮಯದೊಳಗೆ ಒಟ್ಟಾರೆ 40 ಮೀ. ಪೂರೈಸಲು ವಿಫಲರಾದರೆ ಪರೀಕ್ಷೆ ಕೊನೆಗೊಳ್ಳುತ್ತದೆ. ಲ್ಯಾಪ್ಸ್ ಮತ್ತು ಓಟದ ವೇಗ
ಆಧರಿಸಿ ಅಂಕ ನೀಡಲಾಗುತ್ತದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Naveen Kodase