US ಓಪನ್ 2019: ನಡಾಲ್‌ಗೆ ಸುಲಭ ಜಯ!
ನಿರೀಕ್ಷೆಯಂತೆ 18 ಗ್ರ್ಯಾಂಡ್‌ಸ್ಲಾಂ ಒಡೆಯ ರಾಫೆಲ್ ನಡಾಲ್ ಯುಎಸ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಅದರಂತೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಈ ಕುರಿತಾದ ವರದಿ ಇಲ್ಲಿದೆ ನೊಡಿ...
ನ್ಯೂಯಾರ್ಕ್[ಆ.29]: 18 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್ ನಡಾಲ್, ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!
4ನೇ ಯುಎಸ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್, ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಪ್ರೇಲಿಯಾದ ಜಾನ್ ಮಿಲ್ಮನ್ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ನಡಾಲ್‌ಗೆ ಆಸ್ಪ್ರೇಲಿಯಾದ ಥಾನಾಸಿ ಕೊಕ್ಕಿನಾಕಿಸ್ ಎದುರಾಗಲಿದ್ದಾರೆ.
ಅಗ್ರ 10ರಲ್ಲಿ ನಾಲ್ವರು ಔಟ್: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ 10 ಶ್ರೇಯಾಂಕ ಪಡೆದ ಆಟಗಾರರ ಪೈಕಿ ನಾಲ್ವರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. 4ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್, 8ನೇ ಶ್ರೇಯಾಂಕಿತ ಸ್ಟೆಫಾನೋ ಸಿಟ್ಸಿಪಾಸ್, 9ನೇ ಶ್ರೇಯಾಂಕಿತ ಕರೆನ್ ಖಚನೊವ್ ಹಾಗೂ 10ನೇ ಶ್ರೇಯಾಂಕಿತ ರೊಬೆರ್ಟೊ ಬಟಿಸ್ಟಾಅಗುಟ್ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.
US ಓಪನ್ 2019: 2ನೇ ಸುತ್ತಿಗೆ ಪ್ಲಿಸ್ಕೋವಾ
ಸ್ಟೀಫನ್ಸ್‌ಗೆ ಸೋಲು: 2017ರ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್, ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ರಷ್ಯಾದ ಶ್ರೇಯಾಂಕ ರಹಿತ ಆಟಗಾರ್ತಿ ಅನ್ನಾ ಕಲಿಸ್ಕಾಯಾ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು.
ಇದೇ ವೇಳೆ 5ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ಹಾಗೂ 6ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ, 2ನೇ ಸುತ್ತಿಗೇರಿದರು.