ಬೆಂಗಳೂರು(ಆ.28):  ನೀವು ಕೇಳಿದ್ದು ನಿಜ..ವಿಶ್ವ ಟೆನಿಸ್‌ ಹೃದಯ ಸಾಮ್ರಾಟ ಸ್ವಿಸ್ ನ ರೋಜರ್ ಫೆಡರರ್ ವಿರುದ್ಧ ಅಬ್ಬರಿಸಿದವನು ಭಾರತದ ಸುಮಿತ್ ನಗಾಲ್...ಇನ್ನೊಮ್ಮೆ ಓದಿಕೊಳ್ಳಿ ರಾಫೆಲ್ ನಡಾಲ್ ಅಲ್ಲ...ಸುಮಿತ್ ನಗಾಲ್..ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಮೊದಲ ಸುತ್ತಿನಲ್ಲೇ ಫೆಡರರ್ ನನ್ನ ನೆಲಕ್ಕೆ‌ ಕೆಡವಿಕೊಂಡಿದ್ದು ಹರ್ಯಾಣದ ಝಜ್ಜರ್ ನ ಹುಡುಗ ನಗಾಲ್...ಇವನ ಬಗ್ಗೆ ಬರೆದಿರುತ್ತೇನೆ...ಮುಂದೆ ಬೇಕಾಗುತ್ತಾನೆ.

ಇದನ್ನೂ ಓದಿ: ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

ಸುಮಾರು ಜನರಿಗೆ ಈ ನಗಾಲ್ ಗೊತ್ತಿಲ್ಲ...ಹಿಂದೊಮ್ಮೆ ವಿಂಬಲ್ಡನ್ ಹುಡುಗರ ಡಬಲ್ಸ್ ನಲ್ಲಿ ವಿಯಟ್ನಾಮ್ ಹುಡುಗನನ್ನ ಜೊತೆ ಮಾಡಿಕೊಂಡು ಟೈಟಲ್ ಗೆದ್ದಿದ್ದ..ಬೆಂಗಳೂರಿನಲ್ಲೂ ಆಡಿ ಒಂದು ಎಟಿಪಿ ಗೆದ್ದಿದ್ದಾನೆ...ವಿಷಯ ಅದಲ್ಲ....ಫೆಡರರ್ ಹೃದಯ ನಿಲ್ಲಿಸಿದ್ದು....ಹೇಗೆ ಅಂದ್ರಾ..

ಇಡೀ ವರ್ಷಕ್ಕೆ ನಾಲ್ಕೇ ನಾಲ್ಕು ಗ್ರಾಂಡ್ ಸ್ಲಾಮ್ ನಡೆಯುತ್ತವೆ...ಅದರಲ್ಲಿ ಕೊನೆಯದು ಯುಎಸ್ ಓಪನ್. ಅರ್ಹತಾ ಸುತ್ತಿನಿಂದ ಆರಿಸಿ ಬಂದಿದ್ದವನು ಸುಮಿತ್ ನಗಾಲ್....ಎದುರಾಳಿ, ಹೆಬ್ಬುಲಿಯಂಥ ಫೆಡರರ್...ಈ ಹೆಸರು ಕೇಳಿಯೇ ಟೆನಿಸ್ ಸಾಮ್ರಾಜ್ಯ ಬರೆದು ಕೊಟ್ಟು ಹೋದವರಿದ್ದಾರೆ.. ನಗಾಲ್ ಅಂತ ಹುಡುಗನಾ?. ಅಲ್ಲವೇ ಅಲ್ಲ .ಭಾರತದ ಮಟ್ಟಿಗೆ ಅವನು ಹರ್ಯಾಣದ ಮರಿ ಹುಲಿ..

ಇದನ್ನೂ ಓದಿ: ದಿಗ್ಗಜ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್!

ನಂಬಿ ಆಗಸ್ಟ್ 16 ಕ್ಕೆ ಅವನು 22 ತುಂಬಿದ ಹುಡುಗ...ಫೆಡರರ್ ಅದಾಗಲೇ 20 ಗ್ರಾಂಡ್ ಸ್ಲಾಮ್ ಗಳ ಒಡೆಯ...ಮುಖಾಮುಖಿ ಶುರು...
ಮೂರು ದಿನ ಊಟ ಬಿಟ್ಟು ಆಡಿದರೂ ಫೆಡರರ್ ಮೊದಲ ಸೆಟ್ ಸೋಲಲಾರ...ಅಂತಹ ಫೆಡೆಕ್ಸ್ ...ನಗಾಲ್‌ನ  ಪವರ್ ಫುಲ್ ಫೋರ್ ಹ್ಯಾಂಡ್ ಹೊಡೆತಗಳಿಗೆ ತತ್ತರಿಸಿ ಹೋಗಿದ್ದ..ನೋಡ ನೋಡುತ್ತಿದ್ದಂತೆ ಪ್ರಚಂಡ ಪ್ರಬುದ್ಧನಂತೆ ಆಡಿಬಿಟ್ಟ ...ಮೊದಲ ಸೆಟ್ ತನ್ನ ಹೆಸರಿಗೆ ಬರೆಸಿಕೊಂಡ...ಲೆಕ್ಕಕ್ಕೆ 6-4.

ನ್ಯೂಯಾರ್ಕ್ ನ ಆರ್ಥರ್ ಆಷ್ ಸ್ಟೇಡಿಯಂ ಗೆ ಒಂದು ಸುತ್ತು ತಲೆ ತಿರುಗು..ನೆನಪಿರಲಿ ಯುಎಸ್ ಓಪನ್ ನಲ್ಲಿ ಫೆಡರರ್ ಈ ರೀತಿ ಮೊದಲ ಸೆಟ್ ಕಳೆದುಕೊಂಡಿದ್ದು ಕೇವಲ ವಿಶ್ವದ ನಾಲ್ಕು ಆಟಗಾರರ ವಿರುದ್ಧ ಮಾತ್ರ...ನಗಾಲ್ ವಿರುದ್ಧದ ಈ ರೀತಿಯ ಸೆಟ್ ಸೋಲನ್ನ ಫೆಡರರ್‌ ಹೆಂಡತಿ ಕೂಡ ನಂಬಲಿಲ್ಲ. ಭಾರತದ ಯಾವೊಬ್ಬ ಆಟಗಾರನೂ ಕಳೆದ 20 ವರ್ಷಗಳಲ್ಲಿ ಯುಎಸ್ ಓಪನ್ ನಲ್ಲಿ ಮೊದಲ ಸೆಟ್ ಗೆದ್ದಿಲ್ಲ...

ನೆನಪಿರಲಿ ಅವನು ಫೆಡರರ್....ನಿಂತೇ ಎದುರಾಳಿಯ ಮೀನಖಂಡವನ್ನ ಕರಗಿಸಿಬಿಡಬಲ್ಲ ಚಾಣಾಕ್ಷ ಆಟಗಾರ...ಅಷ್ಟಕ್ಕೆ ಬಿಡುತ್ತಾನಾ..ನೋ ವೇ....ಗೆದ್ದ....ಆಟದ ಲೆಕ್ಕಕ್ಕೆ ನಗಾಲ್ 6-4, 1-6, 2-6, 4-6 ರಿಂದ ಸೋತಿದ್ದ ಅಷ್ಟೇ...ನಿಮಗೆ ಗೊತ್ತಿರಲಿ ಫೆಡರರ್ ಕೈಯಲ್ಲಿ 57 Unforced errors ಮಾಡಿಸಿದ್ದ ನಗಾಲ್. ಇದು ಸೋಲಲ್ಲ ಹೊಸ ಭರವಸೆ. ನಗಾಲ್ ಹೇಳಿದಂತೆ ಇನ್ನೊಂದು ಸೆಟ್‌ ಗೆದ್ದಿದ್ದರೆ ಆಮೇಲಿಂದು ಆಮೇಲೆ....ಅಲ್ಲವಾ..

ಬೆಳಿಗ್ಗೆ ಎದ್ದು ಫೆಡರರ್  ಫೋಟೋಗೆ ಒಂದು ನಮಸ್ಕಾರ ಹಾಕಿ ಟೆನಿಸ್ ಕಲಿತವನು ನಗಾಲ್..ಅಪ್ಪಟ ಫ್ಯಾನ್....ಕೋರ್ಟ್ ನಲ್ಲಿ ಅವನೇ ಎದುರಾಳಿ.....it was a dream game.ಕನಸಿನಂಥ ಪಂದ್ಯ.... ಅವನು ಆಡಿದ...ಸಿಂಹದಂತೆ...coincidentally ಅವನ sun sign LEO...ಹತ್ತು ವರ್ಷಗಳ‌ ಹಿಂದೆ ಮಹೇಶ್ ಭೂಪತಿ ಆರಿಸಿದ್ದ ಭರವಸೆಯ ಹುಡುಗ...ಭಾರತಕ್ಕೆ ಭರವಸೆಯಾಗುತ್ತಾನೆ..ಅನುಮಾನ ಪಕ್ಕಕ್ಕಿರಲಿ...

I'm just some dude from India. I'm fine with that until I make my name,".ನಗಾಲ್ ಮಾತು ಕೇಳಿ..ಹೌದು ಈಗ್ಗೆ ಇದಿಷ್ಟೇ.....ಅಪ್ಪ ಅಮ್ಮನ ಅಷ್ಟೂ ಸಂಬಳ ಕೇಳುವ, ಸರಿಯಾದ ಕೋಚ್ ಗಳಿಗೆ ಭಾರತವಿಡೀ ಹುಡುಕಾಡ ಬೇಕಿರುವ ಭಾರತದಲ್ಲಿ ನಗಾಲ್ ಒಂದು ಆಶಾಕಿರಣ...ಪೇಸ್, ಭೂಪತಿ, ಹುಡುಗಿ ಸಾನಿಯಾ ನಂತರದ ಹೊಸ ಬೆಳಕು....ಬೆಳಗು ಹುಡುಗ, ಎಂದಿನಂತೆ ಭಾರತೀಯರ ಹಾರೈಕೆ‌ ನಿನ್ನೊಂದಿಗೆ.

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್ ಆ್ಯಂಕರ್