Asianet Suvarna News Asianet Suvarna News

US ಓಪನ್ 2019: 2ನೇ ಸುತ್ತಿಗೆ ಪ್ಲಿಸ್ಕೋವಾ

ಯು.ಎಸ್ ಓಪನ್ ಟೂರ್ನಿಯಲ್ಲಿ ವಿಶ್ವ ನಂ.3 ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಶುಭಾರಂಭ ಮಾಡಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ಕೇ ನಿಶಿಕೋರಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Karolina Pliskova powers through Martincova clash to kick off 2019 US Open campaign
Author
New York, First Published Aug 27, 2019, 10:48 AM IST
  • Facebook
  • Twitter
  • Whatsapp

ನ್ಯೂಯಾರ್ಕ್[ಆ.27]: ವರ್ಷದ ಕೊನೆ ಟೆನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ವಿಶ್ವ ನಂ.3 ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಶುಭಾರಂಭ ಮಾಡಿದ್ದಾರೆ.

ಇಂದಿನಿಂದ ಯುಎಸ್ ಓಪನ್ ; ಋತುವಿನ ಕೊನೆ ಗ್ರ್ಯಾಂಡ್‌ಸ್ಲಾಮ್

ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ತಮ್ಮ ದೇಶದವರೇ ಆದ ತೆರೆಜ್ ಮಾರ್ಟಿನ್‌ಕೊವಾ ವಿರುದ್ಧ 7-6(8/6), 7-6 (7/3) ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದರು. ಇದೇ ವೇಳೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾದ ಟ್ರುಂಗೆಲಿಟಿ ಗಾಯಗೊಂಡು ನಿವೃತ್ತಿ ಪಡೆದ ಕಾರಣ, 7ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೇ ನಿಶಿಕೋರಿ 2ನೇ ಸುತ್ತಿಗೆ ಪ್ರವೇಶ ಪಡೆದರು.

ಡಬಲ್ಸ್: ಭಾರತದ ಮೂವರು ಕಣಕ್ಕೆ :

ಪುರುಷರ ಡಬಲ್ಸ್‌ನಲ್ಲಿ ಭಾರತದ ಮೂವರು ಕಣಕ್ಕಿಳಿಯಲಿದ್ದಾರೆ. ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಭಾರತೀಯರು ಆಡುತ್ತಿಲ್ಲ. ಮಿಶ್ರ ಡಬಲ್ಸ್‌ನ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

Follow Us:
Download App:
  • android
  • ios