ಜೈಪುರ(ಮಾ.26): ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಪಂದ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿ ಜೋಸ್ ಬಟ್ಲರ್ ವಿಕೆಟ್ ಕಬಳಿಸಿದ್ದರು. ಐಸಿಸಿ ನಿಯಮದನ್ವಯ ಇದು ಸರಿಯಾಗಿದ್ದರೂ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಅನ್ನೋ ವಿವಾದ ಭುಗಿಲೆದ್ದಿದೆ.

ಇದನ್ನೂ ಓದಿ: ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!

ಮಂಕಡ್ ರನೌಟ್‌ನಿಂದ ಅದ್ಬುತ ಫಾರ್ಮ್‌ನಲ್ಲಿದ್ದ ಜೋಸ್ ಬಟ್ಲರ್ 69 ರನ್ ಸಿಡಿಸಿ ಔಟಾದರು. ಈ ವಿಕೆಟ್ ಪಂದ್ಯದ ದಿಕ್ಕನ್ನೇ ಬದಲಿಸಿತು. ರಾಜಸ್ಥಾನ ಸೋಲಿಗೆ ಶರಣಾಯಿತು. ಅಪರೂಪದ ಮಂಕಡ್ ರನೌಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಆದರೆ ಜೋಸ್ ಬಟ್ಲರ್ ಮಂಕಡಿಂಗ್ ರನೌಟ್ ಆಗುತ್ತಿರುವುದು ಇದೇ ಮೊದಲಲ್ಲ. 

ಇದನ್ನೂ ಓದಿ: IPL 2019: ರಾಜಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಪಂಜಾಬ್

2014ರಲ್ಲಿ ಜೋಸ್ ಬಟ್ಲರ್ ಇದೇ ರೀತಿ ಮಂಕಡ್ ರನೌಟ್ ಆಗಿದ್ದರು. ಎಡ್ಜ್‌ಬಾಸ್ಟನ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಮಂಕಡ್ ರನೌಟ್‌ಗೆ ಬಲಿಯಾಗಿದ್ದರು. ಲಂಕಾ ಸ್ಪಿನ್ನರ್ ಸಚಿತ್ರಾ ಸೇನಾನಾಯಕೆ  ನಾನ್ ಸ್ಟ್ರೈಕರ್ ಬಟ್ಲರ್ ಬೌಲ್ ಮಾಡೋ ಮೊದಲೇ ಕ್ರೀಸ್ ಬಿಟ್ಟು ತೆರಳೋ ಕುರಿತು ಎಚ್ಚರಿಕೆ ನೀಡಿದ್ದರು. ಮತ್ತೆ ಕ್ರೀಸ್ ಬಿಟ್ಟ ಬಟ್ಲರ್‌‌ಗೆ ಮಂಕಡಿಂಗ್ ಮೂಲಕ ಸೇನಾನಾಯಕೆ ರನೌಟ್ ಮಾಡಿದರು. ಇದೀಗ ಅಶ್ವಿನ್ ಮಂಕಡಿಂಗ್ ಮೂಲಕ ಬಟ್ಲರ್‌ನ್ನು ಔಟ್ ಮಾಡಿದ್ದಾರೆ.