ಜೈಪುರ(ಮಾ.25): ತವರಿನಲ್ಲಿ ಗೆಲವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕಿಂಗ್ಸ್ ಇಲೆವೆನ್ ಶಾಕ್ ನೀಡಿದೆ. 185 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 14 ರನ್ ಗೆಲುವು ದಾಖಲಿಸಿದ  ಪಂಜಾಬ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

"

ಬೃಹತ್ ಟಾರ್ಗೆಟ್  ರಾಜಸ್ಥಾನ ರಾಯಲ್ಸ್‌ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 78 ರನ್ ಸಿಡಿಸಿತು. ಆದರೆ ರಹಾನೆ 27 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಅಬ್ಬರಿಸಿದರು.

ಇದನ್ನೂ ಓದಿ: IPL 2019: ರಾಜಸ್ಥಾನ ವಿರುದ್ಧ ಅಬ್ಬರಿಸಿ ದಾಖಲೆ ಬರೆದ ಗೇಲ್!

ಅರ್ಧಶತಕ ಸಿಡಿಸಿ ರಾಜಸ್ಥಾನ ತಂಡಕ್ಕೆ ಆಸರೆಯಾಗಿದ್ದ ಬಟ್ಲರ್‌, ಅಶ್ವಿನ್ ಕೆಂಗಣ್ಣಿಗೆ ಗುರಿಯಾದರು. ಬೌಲಿಂಗ್ ಮಾಡೋ ವೇಳೆ ಕ್ರೀಸ್‌ನಿಂದ ಹೊರಗಿದ್ದ ಬಟ್ಲರ್‌ಗೆ ಅಶ್ವಿನ್ ಶಾಕ್ ನೀಡಿದರು. ಬೌಲ್ ಮಾಡದೇ ಬೇಲ್ಸ್ ಎಗರಿಸಿದ ಅಶ್ವಿನ್ ಅಂಪೈರ್ ಬಳಿ ಮನವಿ ಮಾಡಿದರು. ಇತ್ತ ಅಂಪೈರ್ ಯಾವುದೇ ಎಚ್ಚರಿಕೆ ನೀಡಿದೆ ಔಟ್ ತೀರ್ಪು ನೀಡಿದರು. ಇದು ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಯ್ತು.

ಬಟ್ಲರ್ 69 ರನ್ ಸಿಡಿಸಿ ಔಟಾದರು. ಬಳಿಕ ಸಂಜು ಸಾಮ್ಸನ್ ಹಾಗೂ ಸ್ಟೀವ್ ಸ್ಮಿತ್ ತಂಡವನ್ನು ಗೆಲವಿನ ದಡ ಸೇರಿಸೋ ಪ್ರಯತ್ನ ಮಾಡಿದರು. ಆದರೆ 19 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಸ್ಟೀವ್ ಸ್ಮಿತ್‌, ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಅದ್ಬುತ ಕ್ಯಾಚ್ ಹಿಡಿಯೋ ಮೂಲಕ ರಾಜಸ್ಥಾನಕ್ಕೆ ಆಘಾತ ನೀಡಿದರು. ಸಂಜು ಸಾಮ್ಸನ್ 30 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!

ಅಂತಿಮ ಹಂತದಲ್ಲಿ ರಾಜಸ್ಥಾನ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಬೆನ್ ಸ್ಟೋಕ್ಸ್ ಕೇವಲ 6 ರನ್ ಸಿಡಿಸಿ ಔಟಾದರು. ರಾಹುಲ್ ತ್ರಿಪಾಠಿ 1, ಜೋಫ್ರಾ ಆರ್ಚರ್ 2 ರನ್ ಸಿಡಿಸಿ ಔಟಾದರು. ಅಂತಿಮ 6 ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ 21 ರನ್ ಬೇಕಿತ್ತು. ಅಷ್ಟರಲ್ಲಿ ಜಯದೇವ್ ಉನಾದ್ಕಟ್, ಕೆ ಗೌತಮ್ ವಿಕೆಟ್ ಪತನಗೊಂಡಿತು. 20 ಓವರ್‌ಗಳಲ್ಲಿ ರಾಜಸ್ತಾನ 9 ವಿಕೆಟ್ ನಷ್ಟಕ್ಕೆ 170 ರನ್  ಸಿಡಿಸಿ ಸೋಲೊಪ್ಪಿಕೊಂಡಿತು.