ಜೈಪುರ(ಮಾ.26): ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಲೀಗ್ ಪಂದ್ಯ ವಿಶ್ವಮಟ್ಟದಲ್ಲೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂಜಾಬ್ ನಾಯಕ ಆರ್ ಅಶ್ವಿನ್, ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿದರು. ಇದಕ್ಕೆ ಕ್ರಿಕೆಟ್ ದಿಗ್ಗಜರಿಂದ ಹಿಡಿದು ಅಭಿಮಾನಿಗಳ ವರೆಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL 2019: ರಾಜಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಪಂಜಾಬ್

ಅಶ್ವಿನ್‌ ಚೆಂಡು ಎಸೆಯುವ ಮೊದಲೇ ಬಟ್ಲರ್‌ ಕ್ರೀಸ್‌ ಬಿಟ್ಟಿದ್ದರು. ಐಸಿಸಿ ನಿಯಮದ ಪ್ರಕಾರ, ಈ ರೀತಿ ಮಾಡಲು ಅನುಮತಿ ಇದೆ. ಮಂಕಡಿಂಗ್ ಮೂಲಕ ಅಶ್ವಿನ್ ರನೌಟ್ ಮಾಡಿ ಮನವಿ ಮಾಡಿದರು. ಇತ್ತ ಅಂಪೈರ್ ಯಾವುದೇ ಎಚ್ಚರಿಕೆ ನೀಡಿದ ನೇರವಾಗಿ ಔಟ್ ತೀರ್ಪು ನೀಡಿದರು. ರನೌಟ್‌ ಬಳಿಕ ಅಶ್ವಿನ್‌ ಹಾಗೂ ಬಟ್ಲರ್‌ ನಡುವೆ ಮಾತಿನ ಚಕಮಕಿ ನಡೆಯಿತು. ಸಾಮಾಜಿಕ ತಾಣಗಳಲ್ಲೂ ಈ ರನೌಟ್‌ ಭಾರೀ ಚರ್ಚೆಗೆ ಕಾರಣವಾಗಿದೆ.