ನವ​ದೆ​ಹ​ಲಿ(ಸೆ.08): ಕ್ವಿಂಟನ್‌ ಡಿ ಕಾಕ್‌ ನೇತೃ​ತ್ವದ ದಕ್ಷಿಣ ಆಫ್ರಿಕಾ ತಂಡ ಶನಿ​ವಾರ ಭಾರ​ತ​ಕ್ಕೆ ಬಂದಿ​ಳಿ​ಯಿತು. ಸೆ.15ರಿಂದ ಟೀಂ ಇಂಡಿಯಾ ವಿರುದ್ಧ ದ.ಆ​ಫ್ರಿಕಾ ತಂಡ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು ಆಡಲಿದೆ. 

ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಮೊದಲ ಪಂದ್ಯ ಧರ್ಮ​ಶಾ​ಲಾ​ದಲ್ಲಿ ನಡೆ​ಯ​ಲಿದ್ದು, ಸೆ.18ರಂದು ಮೊಹಾ​ಲಿ​ಯಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಸೆ.22ಕ್ಕೆ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗ​ಳೂರು ಆತಿಥ್ಯ ವಹಿ​ಸ​ಲಿದೆ. 

ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಟಿ20 ಬಳಿಕ 3 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯಲ್ಲಿ ಭಾರತ-ದ.ಆ​ಫ್ರಿಕಾ ತಂಡ​ಗಳು ಮುಖಾ​ಮುಖಿಯಾಗಲಿವೆ. ಅ.2ರಿಂದ ವಿಶಾ​ಖ​ಪ​ಟ್ಟಣಂನಲ್ಲಿ ಮೊದಲ ಟೆಸ್ಟ್‌ ನಡೆ​ಯ​ಲಿದ್ದು, ಅ.10ರಿಂದ ಪುಣೆಯಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಅ.19ರಿಂದ ರಾಂಚಿ​ಯಲ್ಲಿ 3ನೇ ಪಂದ್ಯ ಆರಂಭ​ಗೊ​ಳ್ಳ​ಲಿದೆ.