Asianet Suvarna News Asianet Suvarna News

ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಅಭೂತಪೂರ್ವ ಪ್ರದರ್ಶನ ತೋರುವುದರೊಂದಿಗೆ ಒಂದೂ ಪಂದ್ಯ ಸೋಲದೇ ಕೆರಿಬಿಯನ್ ಪ್ರವಾಸ ಮುಗಿಸಿದೆ. ಇನ್ನು ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India Thrash West Indies By 257 Runs To Clean Sweep Series
Author
Jamaica, First Published Sep 3, 2019, 12:13 PM IST

ಕಿಂಗ್ಸ್’ಟನ್[ಸೆ.03]: ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ, ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 210 ರನ್’ಗಳಿಗೆ ಆಲೌಟ್ ಮಾಡುವ  257 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ 120 ಅಂಕಗಳೊಂದಿಗೆ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಗೆಲುವಿನತ್ತ ಹೆಜ್ಜೆ ಇಟ್ಟ ಭಾರತ; ಪಂದ್ಯ ಉಳಿಸಲು ವಿಂಡೀಸ್ ಹೋರಾಟ!

ಗೆಲ್ಲಲು 468 ರನ್’ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 59.5 ಓವರ್’ಗಳಲ್ಲಿ 210 ರನ್’ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 2 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. ಇನ್ನು ವಿಂಡೀಸ್ ಪರ ಶಮರ್ಥ್ ಬ್ರೂಕ್ಸ್ ಅರ್ಧಶತಕ ಸಿಡಿಸಿ ರನೌಟ್ ಆದರು. ಇನ್ನು ಡ್ಯಾರನ್ ಬ್ರಾವೋ ಬದಲು ಆಡಲಿಳಿದ ಜೆರ್ಮೖನ್ ಬ್ಲಾಕ್’ವುಡ್[38] ಹಾಗೂ ನಾಯಕ ಜೇಸನ್ ಹೋಲ್ಡರ್[39] ಟೀಂ ಇಂಡಿಯಾ ಬೌಲರ್’ಗಳೆದುರು ಕೊಂಚ ಪ್ರತಿರೋಧ ತೋರಿದರಾದರೂ, ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ.

ಸ್ಟ್ರೆಂಥ್ & ಕಂಡೀಷನ್ ಸ್ಟಾಫ್ ಆಯ್ಕೆ; ಕೊಹ್ಲಿ, ಶಾಸ್ತ್ರಿಯಲ್ಲಿ ಭಿನ್ನಮತ!

ಈ ಗೆಲುವಿನೊಂದಿಗೆ ವಿರಾಟ್ ಒಂದೂ ಸೋಲು ಕಾಣದೆ ಯಶಸ್ವಿಯಾಗಿ ವಿದೇಶಿ ಪ್ರವಾಸ ಮುಗಿಸಿದೆ. ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಏಕದಿನ ಸರಣಿಯನ್ನು 2-0 ಅಂತರದಿಂದ ಟೀಂ ಇಂಡಿಯಾ ಜಯಿಸಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ ಭಾರತ ಅಜೇಯ ಪ್ರಾಬಲ್ಯ ಮೆರೆದಿದೆ.

ವಿರಾಟ್ ನಂ.1 ನಾಯಕ: ಕಿಂಗ್ಸ್’ಟನ್ ಟೆಸ್ಟ್ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ಭಾರತದ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಮೊದಲು ಎಂ.ಎಸ್ ಧೋನಿ ಟಿಂ ಇಂಡಿಯಾವನ್ನು 27 ಬಾರಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಕೊಹ್ಲಿ 28 ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಎನಿಸಿದ್ದಾರೆ.   
 
 

Follow Us:
Download App:
  • android
  • ios