Asianet Suvarna News Asianet Suvarna News

ಸಾನಿಯಾ ಮಗುವಿಗೆ ಯಾವ ದೇಶದ ಪೌರತ್ವ..?

ನಮಗೆ ಗಂಡು ಮಗುವಾಗಿದೆ ಎಂದು ತಿಳಿಸಲು ಅತೀವ ಸಂತೋಷವಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ, ಎಲ್ಲರ ಪ್ರಾರ್ಥನೆ ಹಾರೈಕೆಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ. ಇದೀಗ ಸಾನಿಯಾ ಮಗುವಿಗೆ ಯಾವ ದೇಶದ ಪೌರತ್ವ ಸಿಗಲಿದೆ ಎನ್ನುವ ಕುತೂಹಲ ಜೋರಾಗಿದೆ. 

Question Regards Nationality of Sania Mirza and Shoaib Malik Son
Author
Lahore, First Published Oct 30, 2018, 11:46 AM IST

ಲಾಹೋರ್[ಅ.30]; ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಪತಿ ಶೋಯೆಬ್ ಮಲಿಕ್ ಈ ಶುಭಸುದ್ದಿಯನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಇದನ್ನು ಓದಿ:ಮೂಗುತಿ ಸುಂದರಿ ಸಾನಿಯಾ ಮಡಿಲಿಗೆ ಗಂಡು ಕೂಸು !

ಗಂಡು ಮಗುವಾಗಿದೆ ಎಂದು ತಿಳಿಸಲು ಅತೀವ ಸಂತೋಷವಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ, ಎಲ್ಲರ ಪ್ರಾರ್ಥನೆ ಹಾರೈಕೆಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ. ಇದೀಗ ಸಾನಿಯಾ ಮಗುವಿಗೆ ಯಾವ ದೇಶದ ಪೌರತ್ವ ಸಿಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಸಾನಿಯಾ ಪಾಕ್ ಕ್ರಿಕೆಟಿಗನನ್ನು ವರಿಸಿದ್ದರೂ ಭಾರತದ ಪೌರತ್ವವನ್ನು ಉಳಿಸಿಕೊಂಡಿದ್ದರು. ಇದೀಗ ಸಾನಿಯಾ ಮಗು ಯಾವ ದೇಶದ ಪೌರತ್ವ ಪಡೆಯಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.

ಇದನ್ನು ಓದಿ: ಸಾನಿಯಾ ಮಿರ್ಜಾ ಸೀಮಂತ: ಚಿತ್ರಗಳೇ ಮಾತನಾಡಲಿ!

ಕೆಲ ತಿಂಗಳುಗಳ ಹಿಂದೆ ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಶೋಯೆಬ್ ಮಲಿಕ್, ನಮ್ಮ ಮಗು ಭಾರತ ಅಥವಾ ಪಾಕಿಸ್ತಾನದ ಪೌರತ್ವ ಪಡೆಯುವುದಿಲ್ಲ. ಬದಲಾಗಿ ಬೇರೊಂದು ರಾಷ್ಟ್ರದ ಪೌರತ್ವ ಪಡೆಯಲಿದೆ ಎಂದು ಹೇಳಿದ್ದರು. ಇದೀಗ ಕ್ರೀಡಾ ತಾರಾ ದಂಪತಿಗೆ ಗಂಡು ಮಗು ಜನಿಸಿದ್ದು ಯಾವ ದೇಶದ ಪೌರತ್ವ ಬಗ್ಗೆ ಕುತೂಹಲ ಮುಂದುವರೆದಿದೆ. 

Follow Us:
Download App:
  • android
  • ios