Swiss Open 2023: ಹಾಲಿ ಚಾಂಪಿಯನ್‌ ಸಿಂಧುಗೆ ಸ್ವಿಸ್ ಆಘಾತ

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಹೋರಾಟ ಎರಡನೇ ಸುತ್ತಿನಲ್ಲೇ ಅಂತ್ಯ
ಸ್ವಿಸ್ ಓಪನ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಸಿಂಧುಗೆ ಇದೀಗ ನಿರಾಸೆ
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶ

PV Sindhu crashes out of Swiss Open in 2nd round clash kvn

ಬಸೆಲ್‌(ಮಾ.25): ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತೆ, ಹಾಲಿ ಚಾಂಪಿಯನ್‌ ಪಿ.ವಿ.ಸಿಂಧು ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ. ವಿಶ್ವ ನಂ.9 ಸಿಂಧು, ಇಂಡೋನೇಷ್ಯಾದ ಪುತ್ರಿ ಕುಸುಮಾ ವರ್ದಾನಿ ವಿರುದ್ಧ 15-21, 21-12, 18-21 ಗೇಮ್‌ಗಳಲ್ಲಿ ಸೋಲುಂಡರು. ಸಿಂಧು ವಿರುದ್ಧ ಅಂ.ರಾ. ಮಟ್ಟದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ವಿಶ್ವ ನಂ.38 ವರ್ದಾನಿ ಗೆಲುವು ಸಾಧಿಸಿ ಸಂಭ್ರಮಿಸಿದರು. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರವೇ ಭಾರತೀಯರ ಸವಾಲು ಮುಕ್ತಾಯಗೊಂಡಿತ್ತು.

ಕ್ವಾರ್ಟರ್‌ಗೆ ಸಾತ್ವಿಕ್‌-ಚಿರಾಗ್‌: ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ ತೈವಾನ್‌ನ ಫಾಂಗ್‌-ಚಿಹ್‌-ಲೀ ಹಾಗೂ ಫಾಂಗ್‌-ಜೆನ್‌-ಲೀ ವಿರುದ್ಧ 12-21, 21-17, 28-26 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ವಿಶ್ವ ನಂ.6 ಭಾರತೀಯ ಜೋಡಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಡೆನ್ಮಾರ್ಕ್ನ ಜೆಪ್ಪೆ ಬೇ ಹಾಗೂ ಲಾಸ್ಸೆ ಮೊಲ್ಹೆಡೆ ಎದುರಾಗಲಿದ್ದಾರೆ.

ಭಾರತದ ಸಲೀಮಾಗೆ ಏಷ್ಯಾ ಹಾಕಿ ಪ್ರಶಸ್ತಿ

ನವದೆಹಲಿ: ಭಾರತ ಹಾಕಿ ತಂಡದ ಮಿಡ್‌ಫೀಲ್ಡರ್‌ ಸಲೀಮಾ ಟೆಟೆ, ಏಷ್ಯಾ ಹಾಕಿ ಫೆಡರೇಷನ್‌(ಎಎಚ್‌ಎಫ್‌)ನ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2022ರಲ್ಲಿ ಸಲೀಮಾ ತೋರಿದ ಪ್ರದರ್ಶನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಕೊರಿಯಾದ ಮುಂಗ್‌ಯಿನೊಂಗ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ವೇಳೆ 20 ವರ್ಷದ ಸಲೀಮಾಗೆ ಪ್ರಶಸ್ತಿ ವಿತರಿಸಲಾಯಿತು.

ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ: ಕ್ರಿಸ್ಟಿಯಾನೊ ರೊನಾಲ್ಡೋ ದಾಖಲೆ!

ಲಿಸ್ಬನ್‌: ಅತಿಹೆಚ್ಚು ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯಗಳನ್ನಾಡಿದ ವಿಶ್ವ ದಾಖಲೆಯನ್ನು ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಬರೆದಿದ್ದಾರೆ. ಗುರುವಾರ ಯುರೋಪಿಯನ್‌ ಅರ್ಹತಾ ಸುತ್ತಿನಲ್ಲಿ ಲೀಚೆಸ್ಟೈನ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ರೊನಾಲ್ಡೋ ಈ ದಾಖಲೆ ಬರೆದರು. ಅದು ದೇಶದ ಪರ ಅವರಾಡಿದ 197ನೇ ಪಂದ್ಯವಾಗಿತ್ತು. ಇದರೊಂದಿಗೆ ಕುವೈಟ್‌ನ ಬಾದರ್‌-ಅಲ್‌-ಮುಟಾವ ಅವರ 196 ಪಂದ್ಯಗಳ ದಾಖಲೆಯನ್ನು 38 ವರ್ಷದ ರೊನಾಲ್ಡೋ ಮುರಿದರು.

ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌: ಲವ್ಲೀನಾ ಸೇರಿದಂತೆ ಭಾರ​ತದ ನಾಲ್ವರು ಫೈನ​ಲ್‌​ಗೆ

ಮೋಟೋ ಜಿಪಿ: ಇಂಡಿಯಾ ರೇಸ್‌ ಜಿಯೋದಲ್ಲಿ ಪ್ರಸಾರ

ಮುಂಬೈ: ಭಾರತದಲ್ಲಿ ನಡೆಯಲಿರುವ ಐತಿಹಾಸಿಕ ಮೋಟೋ ಜಿಪಿ ರೇಸ್‌ನ ಪ್ರಸಾರ ಹಕ್ಕನ್ನು ವಯಾಕಾಂ 18 ಸಂಸ್ಥೆ ಖರೀದಿಸಿದ್ದು ತನ್ನ ಕ್ರೀಡಾ ವಾಹಿನಿ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಮಾಡಲಿದೆ. ಈ ವರ್ಷ ಸೆಪ್ಟೆಂಬರ್‌ 22ರಿಂದ 24ರವರೆಗೂ ಚೊಚ್ಚಲ ಬಾರಿಗೆ ಭಾರತದಲ್ಲಿ ಮೋಟೋ ಜಿಪಿ ರೇಸ್‌ ನಡೆಯಲಿದೆ. 2023ರ ಋುತುವಿನಲ್ಲಿ 18 ದೇಶಗಳಲ್ಲಿ ಒಟ್ಟು 21 ರೇಸ್‌ಗಳು ನಡೆಯಲಿದ್ದು, ಭಾರತದಲ್ಲಿ ನಡೆಯಲಿರುವ ರೇಸ್‌ 14ನೇಯದ್ದಾಗಲಿದೆ.

Latest Videos
Follow Us:
Download App:
  • android
  • ios