ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌: ಲವ್ಲೀನಾ ಸೇರಿದಂತೆ ಭಾರ​ತದ ನಾಲ್ವರು ಫೈನ​ಲ್‌​ಗೆ

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 4 ಬೆಳ್ಳಿ ಖಚಿತ
ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಫೈನಲ್‌ಗೆ ಲಗ್ಗೆ
ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೋ​ಹೈನ್‌ ಫೈನಲ್ ಪ್ರವೇಶ

Womens World Boxing Championships Nikhat Zareen Lovlina Borgohain 2 Others Assure 4 Silver Medals For India kvn

ನವದೆಹಲಿ(ಮಾ.24): ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಾಲ್ವರು ಫೈನ​ಲ್‌ಗೆ ಲಗ್ಗೆ ಇಟ್ಟಿದ್ದು, ಕನಿಷ್ಠ ಬೆಳ್ಳಿ ಪದಕ ಖಚಿ​ತ​ಪ​ಡಿ​ಸಿ​ಕೊಂಡಿ​ದ್ದಾರೆ. ಗುರು​ವಾರ 50 ಕೆ.ಜಿ. ವಿಭಾ​ಗದ ಸೆಮಿ​ಫೈ​ನ​ಲ್‌​ನಲ್ಲಿ ಹಾಲಿ ಚಾಂಪಿ​ಯನ್‌ ನಿಖಾತ್‌ ಒಲಿಂಪಿಕ್ಸ್‌ ಪದಕ ವಿಜೇತೆ, ಕೊಲಂಬಿ​ಯಾದ ವೆಲೆ​ನ್ಸಿ​ಯಾ ಇಂಗ್ರಿಟ್‌ ವಿರುದ್ಧ 5-0 ಗೆಲುವು ಸಾಧಿ​ಸಿ​ದರೆ, 48 ಕೆ.ಜಿ. ವಿಭಾ​ಗ​ದಲ್ಲಿ ನೀತು ಗಂಗಾಸ್‌ ಕಜ​ಕ​ಸ್ತಾ​ನದ ಬಲ್ಕಿ​ಬೆ​ಕೋವಾ ಅವ​ರನ್ನು 5-2ರಿಂದ ಸೋಲಿ​ಸಿ​ದರು. 

ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೋ​ಹೈನ್‌(75 ಕೆ.ಜಿ.​) ಚೀನಾದ ಲಿ ಕ್ವಿಯಾನ್‌ ವಿರುದ್ಧ 4-1ರಿಂದ ಗೆದ್ದು ಮೊದಲ ಬಾರಿ ಫೈನ​ಲ್‌ಗೆ ಲಗ್ಗೆ ಇಟ್ಟರು. 81+ ಕೆ.ಜಿ. ವಿಭಾ​ಗ​ದಲ್ಲಿ ಸ್ವೀಟಿ ಆಸ್ಪ್ರೇ​ಲಿ​ಯಾದ ಎಮ್ಮಾ ಗ್ರೀನ್‌ಟ್ರೀ ವಿರುದ್ಧ 4-3 ಅಂತ​ರ​ದಲ್ಲಿ ಗೆದ್ದು ಫೈನಲ್‌ ತಲು​ಪಿ​ದರು. ಆದರೆ ಕಳೆದ ಅವೃ​ತ್ತಿಯ ಕಂಚು ವಿಜೇತೆ ಮನೀ​ಶಾ​(57 ಕೆ.ಜಿ.), ಸಾಕ್ಷಿ ಚೌಧ​ರಿ​(52 ಕೆ.ಜಿ.), ಜಾಸ್ಮಿ​ನ್‌​(60 ಕೆ.ಜಿ.) ಹಾಗೂ ನುಪೂ​ರ್‌​(81 ಕೆ.ಜಿ.) ಗುರು​ವಾರ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಸೋತು ಹೊರ​ಬಿ​ದ್ದ​ರು.

ಸ್ವಿಸ್‌ ಓಪ​ನ್‌: ಭಾರ​ತೀ​ಯ ಪುರು​ಷರ ಅಭಿ​ಯಾನ ಅಂತ್ಯ

ಬಸೆಲ್‌: 2023ರಲ್ಲಿ ಭಾರ​ತೀಯ ಪುರುಷ ಶಟ್ಲ​ರ್‌​ಗಳ ಕಳಪೆ ಲಯ ಮುಂದು​ವ​ರಿ​ದಿದ್ದು, ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ 2ನೇ ಸುತ್ತಿ​ನಲ್ಲೇ ಅಭಿ​ಯಾನ ಕೊನೆ​ಗೊ​ಳಿ​ಸಿ​ದ್ದಾರೆ. ಗುರು​ವಾರ ಪುರು​ಷರ ಸಿಂಗ​ಲ್ಸ್‌​ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌, ಎಚ್‌.​ಎ​ಸ್‌.​ಪ್ರ​ಣಯ್‌ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿ​ಯನ್‌, ಕರ್ನಾ​ಟ​ಕದ ಮಿಥುನ್‌ ಮಂಜುನಾಥ್‌ ಸೋಲ​ನ​ಭ​ವಿ​ಸಿ​ದರು. ಲಕ್ಷ್ಯ ಸೇನ್‌ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿ​ದ್ದರು.

ಶೂಟಿಂಗ್‌ ವಿಶ್ವ​ಕ​ಪ್‌: ಮತ್ತೆ 2 ಪದಕ ಗೆದ್ದ ಭಾರ​ತೀ​ಯ​ರು

ಭೋಪಾ​ಲ್‌: ಐಎ​ಸ್‌​ಎ​ಸ್‌​ಎಫ್‌ ಪಿಸ್ತೂ​ಲ್‌/ರೈಫಲ್‌ ವಿಶ್ವ​ಕ​ಪ್‌​ನಲ್ಲಿ ಭಾರತ ಮತ್ತೆ​ರಡು ಪದಕ ಬಾಚಿ​ಕೊಂಡಿದೆ. ಗುರು​ವಾರ 10 ಮೀ. ಏ​ರ್‌ ಪಿಸ್ತೂ​ಲ್‌ ಮಿಶ್ರ ತಂಡ ವಿಭಾ​ಗ​ದಲ್ಲಿ ವರುಣ್‌ ತೋಮ​ರ್‌-ರಿಧಂ ಸಂಗ್ವಾನ್‌ ಬೆಳ್ಳಿ ಪದಕ ಗೆದ್ದ​ರೆ, 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾ​ಗ​ದಲ್ಲಿ ರುದ್ರಾಂಕ್‌್ಷ ಪಾಟೀಲ್‌ ಹಾಗೂ ನರ್ಮದಾ ನಿತಿನ್‌ ಕಂಚು ತಮ್ಮ​ದಾ​ಗಿ​ಸಿ​ಕೊಂಡರು. ಬುಧ​ವಾರ ಭಾರತ ಒಂದು ಚಿನ್ನ, ಕಂಚು ಗೆದ್ದಿತ್ತು.

ಐಪಿಎಲ್ ಟೂರ್ನಿಯಲ್ಲಿ ನಡೆದ ಈ ಕಾಂಟ್ರೊವರ್ಸಿಗಳು ನಿಮಗೆ ನೆನಪಿವೆಯಾ..?

ಇಂದಿ​ನಿಂದ ಬೆಂಗಳೂರ​ಲ್ಲಿ ವೇಟ್‌​ಲಿ​ಫ್ಟಿಂಗ್‌

ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರಾರ‍ಯಂಕಿಂಗ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ಶುಕ್ರ​ವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆರಂಭ​ಗೊ​ಳ್ಳ​ಲಿದೆ. ಈಗಾ​ಗಲೇ ಗುರು​ವಾರ ತೂಕ ಪರೀಕ್ಷೆ ನಡೆ​ದಿದ್ದು, ಸ್ಪರ್ಧೆ​ಗಳು ಶುಕ್ರ​ವಾರ ಆರಂಭ​ಗೊ​ಳ್ಳ​ಲಿ​ದೆ. ಮಾ.29ಕ್ಕೆ ಕೂಟ ಮುಕ್ತಾ​ಯ​ಗೊ​ಳ್ಳ​ಲಿ​ದೆ.

ಕೂಟದ ಉದ್ಘಾ​ಟನಾ ಸಮಾ​ರಂಭ ಬೆಳಗ್ಗೆ 11.30ಕ್ಕೆ ನಡೆ​ಯ​ಲಿದೆ. ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.​ಗೋ​ವಿಂದ​ರಾಜು, ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಅಧ್ಯಕ್ಷ ದಯಾ​ನಂದ ಪೈ, ಕ್ರೀಡಾ ಇಲಾಖೆ ಆಯುಕ್ತ ಮುಲ್ಲೈ ಮುಹಿ​ಲನ್‌ ಸೇರಿ​ದಂತೆ ಪ್ರಮು​ಖರು ಪಾಲ್ಗೊ​ಳ್ಳ​ಲಿ​ದ್ದಾರೆ. ಟೂರ್ನಿ​ಯಲ್ಲಿ 600ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು ಪಾಲ್ಗೊಳ್ಳಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಮೀರಾಬಾಯಿ ಚಾನು, ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತೆ ಬಿಂದ್ಯಾರಾಣಿ, ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನ ಪದಕ ವಿಜೇತೆ ಆಕಾಂಕ್ಷ, ರಾಜ್ಯದ ಬಿ.ಎನ್‌.ಉಷಾ ಪ್ರಮುಖ ಆಕರ್ಷಣೆ​ಯಾ​ಗಿ​ದ್ದಾರೆ.

Latest Videos
Follow Us:
Download App:
  • android
  • ios