Asianet Suvarna News Asianet Suvarna News

ಪುಲ್ವಾಮ ದಾಳಿ: RP-SG ಕ್ರೀಡಾ ಕಾರ್ಯಕ್ರಮ ಮುಂದೂಡಿದ ಕೊಹ್ಲಿ!

ಪುಲ್ವಾಮದಲ್ಲಿ ನಡೆದ ಭಯೋತ್ವಾದಕ ದಾಳಿಯಿಂದ 40  CRPF ಯೋಧರು ಹುತಾತ್ಮರಾಗಿದ್ದಾರೆ. ಯೋಧರನ್ನು ಕಳೆದುಕೊಂಡ ನೋವಿನಿಂದ RP-SG ಕ್ರೀಡಾಕಾರ್ಯಕ್ರಮವನ್ನ ವಿರಾಟ್ ಕೊಹ್ಲಿ ಮುುಂದೂಡಿದ್ದಾರೆ.

Pulwama terror attack RP SG sports honours event postponed days virat kohli
Author
Bengaluru, First Published Feb 16, 2019, 9:20 AM IST

ನವದೆಹಲಿ(ಫೆ.16): ಪುಲ್ವಾಮದಲ್ಲಿ CRPF ಯೋಧರ ಮೇಲಿನ ಭಯೋತ್ವಾದಕ ದಾಳಿಯಿಂದ ಭಾರತದಲ್ಲಿ ಸೂತಕದ ಛಾಯೆ ಆವರಿಸಿದೆ. ಜೈಶ್-ಇ-ಮೊಹಮ್ಮದ ಭಯೋತ್ವಾದಕ ಸಂಘಟನೆಯ ದಾಳಿಯಿಂದ 40 CRPFಯೋಧರು ಹುತಾತ್ಮರಾಗಿದ್ದಾರೆ. ಘಟನೆಯನ್ನ ಖಂಡಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲ RP-SG ಕ್ರೀಡಾಕಾರ್ಯಕ್ರಮವನ್ನೂ ಮುಂದೂಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!

ಫೆ.15 ರಂದು RP-SG ಭಾರತೀಯ ಕ್ರೀಡಾ ಗೌರವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಹುತಾತ್ಮ CRPF ಯೋಧರಿಗಾಗಿ RP-SG ಕ್ರೀಡಾಕಾರ್ಯಕ್ರಮವನ್ನು ಫೆ.16ಕ್ಕೆ ಮುಂದೂಡಲಾಗಿದೆ. ಈ ಕುರಿತು ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಯೋಧರನ್ನು ಕಳೆದುಕೊಂಡ ನೋವಿನಿಂದ ಕಾರ್ಯಕ್ರಮ ಮುಂದೂಡುವುದಾಗಿ ಕೊಹ್ಲಿ ಹೇಳಿದ್ದಾರೆ.

 

 

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

ಪುಲ್ವಾಮದಲ್ಲಿ ನಡೆದ ಭಯೋತ್ವಾದ ದಾಳಿಯಿಂದ 40  CRPF ಜವಾನರ ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಾಟಕ  CRPF ಯೋಧ ಗುರು ಕೂಡ ಹುತಾತ್ಮರಾಗಿದ್ದಾರೆ. ಇಂದು(ಫೆ.16) ಗುರು ಪಾರ್ಥಿವ ಶರೀರ ಸ್ವಗ್ರಾಮ ಮಂಡ್ಯಗೆ ಆಗಮಿಸಲಿದೆ.

Follow Us:
Download App:
  • android
  • ios