Asianet Suvarna News Asianet Suvarna News

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!

ಫೆ.24 ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2 ಟಿ20 ಹಾಗೂ 5 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಟೀಂ ಇಂಡಿಯಾಗೆ ವಾಪಾಸ್ಸಾಗಿದ್ದಾರೆ. ಇಲ್ಲಿದೆ ಟೀಂ ಇಂಡಿಯಾ ವಿವರ.
 

BCCI announces team India squad for Australia Cricket series
Author
Bengaluru, First Published Feb 15, 2019, 6:01 PM IST

ಮುಂಬೈ(ಫೆ.15): ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಫೆ.24 ರಿಂದ ಆರಂಭಗೊಳ್ಳಲಿರುವ ಆಸಿಸ್ ವಿರುದ್ದದ ಸರಣಿಗೆ ಬಲಿಷ್ಠ ತಂಡವನ್ನ ಆಯ್ಕೆ ಸಮಿತಿ ಪ್ರಕಟಿಸಿದೆ. ನ್ಯೂಜಿಲೆಂಡ್ ವಿರುದ್ದದ ಅಂತಿಮ 2 ಏಕದಿನ ಹಾಗೂ ಟಿ20  ಸರಣಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ವಾಪಾಸ್ಸಾಗಿದ್ದಾರೆ.

ಇದನ್ನೂ ಓದಿ:  ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

ವಿಶ್ರಾಂತಿ ಸೂಚನೆ ನೀಡಿದ್ದ ರೋಹಿತ್ ಶರ್ಮಾ ಕೂಡ ಆಸಿಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಅಮಾನತು ಬಳಿಕ ಭಾರತ ಎ ತಂಡದಲ್ಲಿ ಆಡಿದ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ವಿಶೇಷ ಅಂದರೆ ಆಸ್ಟ್ರೇಲಿಯಾ ವಿರುದ್ದ ಆರಂಭಿಕ 2 ಏಕದಿನ ಪಂದ್ಯ ಹಾಗೂ ಉಳಿದ 3 ಏಕದಿನ ಪಂದ್ಯಕ್ಕೆ 2 ತಂಡಗಳನ್ನ ಆಯ್ಕೆ ಮಾಡಲಾಗಿದೆ.

ಟಿ20 ಸರಣಿಗೆ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶಿಖರ್ ಧವನ್, ರಿಶಬ್ ಪಂತ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ವಿಜಯ್ ಶಂಕರ್, ಯಜುವೇಂದ್ರ ಚೆಹಾಲ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ಮಯಾಂಕ್ ಮಾರ್ಕಂಡೆ

 

 

ಇದನ್ನೂ ಓದಿ:  ಅಂತೂ ಹುತಾತ್ಮರಿಗೆ ನಮನ ಸಲ್ಲಿಸಿದ ಕೊಹ್ಲಿ!

ಮೊದಲ 2 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ದೋನಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ವಿಜಯ್ ಶಂಕರ್, ರಿಶಬ್ ಪಂತ್, ಸಿದ್ದಾರ್ಥ್ ಕೌಲ್

 

 

ಇದನ್ನೂ ಓದಿ:  ಪುಲ್ವಾಮ ದಾಳಿ : ಉಗ್ರರ ಕೃತ್ಯ ಖಂಡಿಸಿದ ಸೆಹ್ವಾಗ್-ಗಂಭೀರ್!

ಅಂತಿಮ 3 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚೆಹಾಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ರಿಶಬ್ ಪಂತ್

 

 

Follow Us:
Download App:
  • android
  • ios