ಪುಲ್ವಾಮ(ಫೆ.14): ಹೊಸ ವರ್ಷದ ಹೊಸ ಸಂಕಲ್ಪದೊಂದಿಗೆ ದೇಶ ಶಾಂತಿಯುತವಾಗಿ ಮುನ್ನಡೆಯುತ್ತಿತ್ತು. ಆದರೆ ದಿಢೀರ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿ 40 ಯೋಧರನ್ನ ಬಲಿ ಪಡೆದಿದೆ. ಜೈಶ್-ಎ-ಮೊಹ್ಮದ್  ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

ಅನಂತ್‌ಪುರ್‌ನಲ್ಲಿ CRPF ಯೋಧರ ಮೇಲಿನ ಏಕಾಏಕಿ ದಾಳಿಗೆ ಇಡಿ ದೇಶವೆ ಬೆಚ್ಚಿ ಬಿದ್ದಿದೆ. ಹುತಾತ್ಮ ಯೋಧರ ನೆನೆದು ದೇಶವೇ ಕಣ್ಣೀರಿಡುತ್ತಿದೆ. ಇತ್ತ ಟೀಂ ಇಂಡಿಯಾ ಹಾಲಿ, ಮಾಜಿ ಕ್ರಿಕೆಟಿಗರು ಉಗ್ರರ ಕೃತ್ಯವನ್ನ ಖಂಡಿಸಿದ್ದಾರೆ. ಇಷ್ಟೇ ಅಲ್ಲ, ಹುತಾತ್ಮ ಯೋಧರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಭಗವಂತ ನೀಡಲಿ. ಗಾಯಗೊಂಡ ಯೋಧರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.