ನವದೆಹಲಿ(ಫೆ.16): ಪುಲ್ವಾಮದಲ್ಲಿ CRPF ಯೋಧರ ಮೇಲೆ ನಡೆದ ಭಯೋತ್ವಾದಕ ದಾಳಿ ಇಡೀ ಭಾರತವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. 40 ಹುತಾತ್ಮ ಯೋಧರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ. ನೋವಿನಲ್ಲಿ ಮಡುವಿನಲ್ಲಿರುವ ಹುತಾತ್ಮ ಯೋಧರ ಕುಟುಂಬಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಆಸರೆಯಾಗಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ : ಉಗ್ರರ ಕೃತ್ಯ ಖಂಡಿಸಿದ ಸೆಹ್ವಾಗ್-ಗಂಭೀರ್!

ಯೋಧರಿಗಾಗಿ ನಾವೇನು ಮಾಡಿದರೂ ಕಡಿಮೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ  ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸುತ್ತೇನೆ ಎಲ್ಲಾ ಮಕ್ಕಳಿಗೆ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತೇನೆ ಎಂದು ಸೆಹ್ವಾಗ್ ಘೋಷಿಸಿದ್ದಾರೆ.

 

 

ಇದನ್ನೂ ಓದಿ: ಮಕ್ಕಳೆಂದು ಪರಿಗಣಿಸಬೇಡಿ- ಸೆಹ್ವಾಗ್‌ಗೆ ವಿಡೀಯೋ ಮೂಲಕ ಹೇಡನ್ ತಿರುಗೇಟು!

ಜೈಶ್-ಇ-ಮೊಹಮ್ಮದ್ ಭಯೋತ್ವಾದಕ ಸಂಘಟನೆಯ ದಾಳಿಗೆ ಭಾರತದ 40 CRPF ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಾಟಕದ ಮಂಡ್ಯ ಮೂಲಕ ಗುರು ಕೂಡ ಹುತಾತ್ಮರಾಗಿದ್ದಾರೆ. ಇಡೀ ದೇಶವೇ ಪ್ರತೀಕಾರಕ್ಕೆ ಕಾಯುತ್ತಿದೆ. ಇದರ ನಡುವೆ ಸೆಹ್ವಾಗ್ ಯೋಧರ ಕುಟುಂಬಕ್ಕೆ ನೆರವಾಗೋ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.