ಮುಂಬೈ[ಡಿ.22]: ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಗಿ ವೊರ್ಕೆರಿ ರಾಮನ್‌ರನ್ನು ನೇಮಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ವಿರುದ್ಧ ಆಡಳಿತ ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಆಕ್ರೋಶ ವ್ಯಕ್ತವಾಗಿದ್ದಾರೆ. 

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅಚ್ಚರಿ ಆಯ್ಕೆ

ಕೋಚ್‌ ಆಗಿ ರಮೇಶ್‌ ಪೊವಾರ್‌ ಅವರೇ ಮುಂದುವರಿಯಬೇಕು ಎಂದು ಡಯಾನ ಪಟ್ಟುಹಿಡಿದಿದ್ದರು. ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ‘ಹಾಸ್ಯಸ್ಪದ’ ಎಂದಿರುವ ಡಯಾನಗೆ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಬೆಂಬಲಿಸಿದ್ದಾರೆ.

ನ್ಯೂಜಿಲೆಂಡ್‌ ಪ್ರವಾಸ: ವೇದಾಗೆ ಗೇಟ್’ಪಾಸ್

ಮೂಲಗಳ ಪ್ರಕಾರ, ಆಯ್ಕೆ ಸಮಿತಿ ಗ್ಯಾರಿ ಕರ್ಸ್ಟನ್ ಹೆಸರನ್ನು ಶಿಫಾರಸ್ಸು ಮಾಡಿತ್ತು. ಆದರೆ ಕರ್ಸ್ಟನ್, ಐಪಿಎಲ್‌ನಲ್ಲಿ ಆರ್‌ಸಿಬಿ ಕೋಚ್‌ ಹುದ್ದೆ ತ್ಯಜಿಸಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ ಕಾರಣ ಅವರನ್ನು ಪರಿಗಣಿಸಲಿಲ್ಲ ಎನ್ನಲಾಗಿದೆ.