ನವದೆಹಲಿ[ಡಿ.22]: ಮುಂದಿನ ತಿಂಗಳು ಭಾರತ ಮಹಿಳಾ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಹಾಗೂ ಟಿ20 ಸರಣಿಗೆ ತಂಡಗಳನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. 

ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಡುವ ಅವಕಾಶ ಪಡೆಯದ ಮಿಥಾಲಿ ರಾಜ್‌, ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಏಕದಿನ ತಂಡವನ್ನು ಮಿಥಾಲಿಯೇ ಮುನ್ನಡೆಸಲಿದ್ದಾರೆ. ಲಯದ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕದ ವೇದಾ ಕೃಷ್ಣಮೂರ್ತಿಯನ್ನು ತಂಡದಿಂದ ಹೊರಹಾಕಲಾಗಿದೆ.

ಟಿ20 ತಂಡದಲ್ಲಿ ಅವರ ಬದಲಿಗೆ ದೆಹಲಿಯ ಪ್ರಿಯಾ ಪೂನಿಯಾಗೆ ಸ್ಥಾನ ನೀಡಲಾಗಿದೆ. ಏಕದಿನ ತಂಡದಲ್ಲಿ ರಾಜ್ಯದ ರಾಜೇಶ್ವರಿ ಗಾಯಕ್ವಾಡ್‌ ಸ್ಥಾನ ಪಡೆದರೆ, ಟಿ20 ತಂಡದಲ್ಲಿ ರಾಜ್ಯದ ಆಟಗಾರ್ತಿಯರಿಲ್ಲ. ಭಾರತ ತಂಡ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅಚ್ಚರಿ ಆಯ್ಕೆ

ಭಾರತ ತಂಡವು ನೂತನ ಕೋಚ್ WV ರಾಮನ್ ಮಾರ್ಗದರ್ಶನದಲ್ಲಿ ಜನವರಿ 24ರಂದು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಟಿ20 ತಂಡವನ್ನು ಹರ್ಮನ್’ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.