ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬದಲು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 8:29 AM IST
Pro Kabaddi League Starting date for season 6 officially announced
Highlights

ಕಳೆದ ವರ್ಷದಂತೆ ಈ ಬಾರಿಯೂ ಪಂದ್ಯಾವಳಿ 13 ವಾರಗಳ ಕಾಲ ನಡೆಯಲಿದ್ದು, 12 ತಂಡಗಳಿರುವ ಲೀಗ್‌ನಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಇನ್ನೆರಡು ವಾರಗಳಲ್ಲಿ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ(ಜು.31]: ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 19ರ ಬದಲು ಪಂದ್ಯಾವಳಿ ಅ.5ರಿಂದ ಆರಂಭಗೊಳ್ಳಲಿದೆ. ಫೈನಲ್ 2019ರ ಜನವರಿ 5ರಂದು ನಿಗದಿಯಾಗಿದೆ. ಈ ಮೊದಲು ಫೈನಲ್ ಪಂದ್ಯ ಜ.29, 2019ಕ್ಕೆ ನಡೆಯಲಿದೆ ಎಂದು ಘೋಷಿಸಲಾಗಿತ್ತು. 

ಇದನ್ನು ಓದಿ:  PKL6: ಹರಾಜಿನ ಬಳಿಕ ಪ್ರೊಕಬಡ್ಡಿ ಲೀಗ್‌ನ 12 ತಂಡಗಳು ಹೇಗಿದೆ ಗೊತ್ತಾ?

ಕಳೆದ ವರ್ಷದಂತೆ ಈ ಬಾರಿಯೂ ಪಂದ್ಯಾವಳಿ 13 ವಾರಗಳ ಕಾಲ ನಡೆಯಲಿದ್ದು, 12 ತಂಡಗಳಿರುವ ಲೀಗ್‌ನಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಇನ್ನೆರಡು ವಾರಗಳಲ್ಲಿ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ:  ಪ್ರೊ ಕಬಡ್ಡಿ ಹರಾಜು- ಯಾರು ಯಾವ ತಂಡಕ್ಕೆ ಸೇಲ್?

ಪ್ರೊ ಕಬಡ್ಡಿ ಆರಂಭಕ್ಕೂ ಮುನ್ನ ಆಗಸ್ಟ್ 19ರಿಂದ ಏಷ್ಯನ್ ಕಬಡ್ಡಿ ಟೂರ್ನಿ ಆರಂಭವಾಗಲಿದ್ದು, ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅಜಯ್ ಠಾಕೂರ್ ಏಷ್ಯನ್ ಕಬಡ್ಡಿ ಟೂರ್ನಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನು ಓದಿ: ಪ್ರೋ ಕಬಡ್ಡಿ: ಮುಂಬೈನಲ್ಲಿ ಈ ಬಾರಿ ನಡೆಯಲ್ಲ ಕಬಡ್ಡಿ ಪಂದ್ಯ?

ಆರನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ಮೋನು ಗೋಯೆತ್’ರನ್ನು 1.5 ಕೋಟಿ ರೂಪಾಯಿಗೆ ಖರೀದಿಸಿತ್ತು. 

loader