ಪ್ರೋ ಕಬಡ್ಡಿ: ಮುಂಬೈನಲ್ಲಿ ಈ ಬಾರಿ ನಡೆಯಲ್ಲ ಕಬಡ್ಡಿ ಪಂದ್ಯ?
2018ರ ಪ್ರೋ ಕಬಡ್ಡಿ ಟೂರ್ನಿ ಆರಂಭಕ್ಕೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ, ಯು ಮುಂಬಾ ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಯು ಮುಂಬಾ ತಂಡದ ತವರಿನ ಪಂದ್ಯಗಳು ಇದೀಗ ಮುಂಬೈನಿಂದ ಸ್ಥಳಾಂತರಗೊಳ್ಳೋ ಸಾಧ್ಯತೆ ದಟ್ಟವಾಗಿದೆ.
ಮುಂಬೈ(ಜು.25): 2018ರ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು-ಮುಂಬಾ ತಂಡದ ತವರು ಪಂದ್ಯಗಳು ಮುಂಬೈನಿಂದ ನಾಸಿಕ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇಷ್ಟು ವರ್ಷ ಮುಂಬೈನ ತವರು ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದ್ದ ಇಲ್ಲಿನ ಎನ್‌ಎಸ್‌ಸಿಐ ಡೋಮ್ ಕ್ರೀಡಾಂಗಣ ಮಾಲೀಕರು, ಪ್ರತಿ ದಿನಕ್ಕೆ ₹25 ಲಕ್ಷ ಬಾಡಿಗೆ ಬೇಡಿಕೆ ಇಟ್ಟಿದ್ದಾರೆ.
ಒಟ್ಟು 10 ದಿನಗಳಿಗೆ ತಂಡ ಬರೋಬ್ಬರಿ ₹2.5 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಪಂದ್ಯಗಳನ್ನು ನಾಸಿಕ್‌ಗೆ ಸ್ಥಳಾಂತರಿಸಿದರೆ, ಇಲ್ಲಿ 2500 ಆಸನ ವ್ಯವಸ್ಥೆಯುಳ್ಳ ಕ್ರೀಡಾಂಗಣ ದಿನಕ್ಕೆ ₹15000 ಬಾಡಿಗೆಗೆ ಸಿಗಲಿದೆ. ಹೀಗಾಗಿ ಪ್ರೋ ಕಬಡ್ಡಿ ಆಡಳಿತ ಮಂಡಳಿ, ಮುಂಬೈ ಪಂದ್ಯಗಳನ್ನ ಸ್ಥಳಾಂತರಿಸಲು ಚಿಂತಿಸಿದೆ.
ಕಳೆದ ಬಾರಿ ಬೆಂಗಳೂರು ಬುಲ್ಸ್ ತಂಡದ ಪಂದ್ಯದಳು ಬೆಂಗಳೂರಿನಿಂದ ನಾಗ್ಪುರಕ್ಕೆ ಶಿಫ್ಟ್ ಆಗಿತ್ತು. 5ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ವೇಳೆ ಬೆಂಗಳೂರು ತಂಡಕ್ಕೆ ಕಂಠೀರವ ಕ್ರೀಡಾಂಗಣ ನೀಡಲು ಯುವಜನ ಸಬಲೀಕರಣ ಇಲಾಖೆ ನಿರಾಕರಿಸಿತ್ತು. ಹೀಗಾಗಿ ಪಂದ್ಯಗಳು ಸ್ಥಳಾಂತರಗೊಂಡಿತ್ತು.