ಪ್ರೊ ಕಬಡ್ಡಿ ಹರಾಜು- ಯಾರು ಯಾವ ತಂಡಕ್ಕೆ ಸೇಲ್?
2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಗಿದಿದೆ. 2 ದಿನಗಳ ಕಾಲ ನಡೆದ ಹರಾಜಿನಲ್ಲಿ 422 ಆಟಾಗಾರರ ಪೈಕಿ 200 ಕಬಡ್ಡಿ ಪಟುಗಳ ಹರಾಜಾಗಿದ್ದಾರೆ.
ಮುಂಬೈ(ಮೇ.31): ಆರನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ಮುಂಬೈನಲ್ಲಿ ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಓಟ್ಟು 422 ಕಬಡ್ಡಿ ಪಟುಗಳ ಪೈಕಿ 200 ಕಬಡ್ಡಿ ಆಟಗಾರರು ಬಿಕರಿಯಾಗಿದ್ದಾರೆ. 12 ತಂಡಗಳು ಪ್ರತಿಭಾನ್ವಿತ ಕಬಡ್ಡಿಪಟುಗಳನ್ನ ಖರೀಧಿಸಲು ಮುಗಿಬಿದ್ದರು. ಈ ಬಾರಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಹೆಗ್ಗಳಿಕೆ ರೈಡರ್ ಮೋನು ಗೊಯತ್ ಪಾಲಾಗಿದೆ. ಹರಿಯಾಣ ಸ್ಟೀಲರ್ಸ್ ತಂಡ ಮೋನು ಗೊಯತ್‌ಗೆ ಬರೋಬ್ಬರಿ 1.51 ಕೋಟಿ ನೀಡಿ ಖರೀದಿಸಿದೆ.
2018ರ ಪ್ರೊ ಕಬಡ್ಡಿ ಹರಾಜಿನಲ್ಲಿ ರಾಹಲ್ ಚೌಧರಿ, ನಿತಿನ್ ತೋಮರ್, ದೀಪಕ್ ಹೂಡ ಸೇರಿದಂತೆ 6 ಕಬಡ್ಡಿಪಟುಗಳು 1 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲಾಗಿದ್ದಾರೆ. ಹಲವು ಆಟಗಾರರು ಹರಾಜಿನಲ್ಲಿ ಬಿಕರಿಯಾಗದೆ ಅಚ್ಚರಿ ಮೂಡಿಸಿದರು.
ಈ ಬಾರಿಯ ಹರಾಜಿನಲ್ಲಿ ಕರ್ನಾಟಕದ ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲಾಗಿದ್ದಾರೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ 79 ಲಕ್ಷ ರೂಪಾಯಿಗೆ ಯುಪಿ ಯೋಧ ತಂಡಕ್ಕೆ ಸೇಲಾದರು. ಬೆಂಗಳೂರು ಬುಲ್ಸ್ ಡಿಫೆಂಡರ್ ನಿತೀಶ್ ಬಿಆರ್ ಹಾಗು ಆನಂದ್‌ಗೆ 8 ಲಕ್ಷ ನೀಡಿ ಖರೀದಿಸಿತು.
ಕೋಟಿ ರೂಪಾಯಿಗೆ ಸೇಲಾದ ಕಬಡ್ಡಿಪಟುಗಳು:
ಆಟಾಗರ | ತಂಡ | ಮೊತ್ತ |
ಮೋನು ಗೊಯತ್ | ಹರಿಯಾಣ ಸ್ಟೀಲರ್ಸ್ | 1.51 ಕೋಟಿ |
ರಾಹುಲ್ ಚೌಧರಿ | ತೆಲುಗು ಟೈಟಾನ್ಸ್ | 1.29 ಕೋಟಿ |
ದೀಪಕ್ ಹೂಡ | ಜೈಪುರ್ ಪಿಂಕ್ ಪ್ಯಾಂಥರ್ಸ್ | 1.15 ಕೋಟಿ |
ನಿತಿನ್ ತೋಮರ್ | ಪುಣೇರಿ ಪಲ್ಟಾನ್ | 1.15 ಕೋಟಿ |
ರಿಶಾಂಕ್ ದೇವಾಡಿಗ | ಯುಪಿ ಯೋಧ | 1.12 ಕೋಟಿ |
ಫಝಲ್ ಅಟ್ರಾಟಲಿ | ಯು ಮುಂಬಾ | 1 ಕೋಟಿ |
ಬೆಂಗಳೂರು ಬುಲ್ಸ್ ಖರೀಧಿಸಿದ ಆಟಗಾರರು:
ಪವನ್ ಕುಮಾರ್ | 52.8 ಲಕ್ಷ |
ಮಹೇಂದ್ರ ಸಿಂಗ್ | 40 ಲಕ್ಷ |
ಕಾಶಿಲಿಂಗ್ ಅಡ್ಕೆ | 32 ಲಕ್ಷ |
ಜಸ್ಮೆರ್ ಸಿಂಗ್ ಗುಲಿಯಾ | 12 ಲಕ್ಷ |
ರಾಜುಲಾಲ್ ಚೌಧರಿ | 8.8 ಲಕ್ಷ |
ಡಾಂಗ್ ಜು ಹಾಂಗ್ | 8 ಲಕ್ಷ |
ಜಿಯಿಂಗ್ ಟೆ ಕಿಮ್ | 8 ಲಕ್ಷ |
ಸಂದೀಪ್ | 8 ಲಕ್ಷ |
ಜವಾಹರ್ ವಿವೇಕ್ | 8 ಲಕ್ಷ |
ಮಹೇಶ್ ಮಾರುತಿ ಎಮ್ | 8 ಲಕ್ಷ |
ಮಹೇಂದ್ರ ಸಿಂಗ್ ಢಾಕ | 8 ಲಕ್ಷ |
ನಿತೀಶ್ ಬಿಆರ್ | 8 ಲಕ್ಷ |
ಅನಿಲ್ | 8 ಲಕ್ಷ |
ಆನಂದ್ ವಿ | 8 ಲಕ್ಷ |
ರೋಹಿತ್ | 8 ಲಕ್ಷ |