PKL 2019: ಪುಣೇರಿ ವಿರುದ್ಧ ನಿರಾಸೆ ಅನುಭವಿಸಿದ ಬುಲ್ಸ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಆಘಾತ ಎದುರಾಗಿದೆ. ಸತತ 3 ಗೆಲುವಿನ ಮೂಲಕ ಯಶಸ್ಸಿನ ನಾಗಾಲೋಟದಲ್ಲಿದ್ದ ಬುಲ್ಸ್ ತಂಡಕ್ಕೆ ಪುಣೇರಿ ಶಾಕ್ ನೀಡಿದೆ.
ಪುಣೆ(ಸೆ.20): ಹ್ಯಾಟ್ರಿಕ್ ಗೆಲುವು ಸಾಧಿಸಿ ಮುನ್ನಗ್ಗುತ್ತಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಪ್ರೊ ಕಬಡ್ಡಿ ಲೀಗ್ ಟೂರ್ನಿ 99ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಆತಿಥೇಯ ಪುಣೇರಿ ಪಲ್ಟಾನ್ ವಿರುದ್ಧ ಮುಗ್ಗರಿಸಿದೆ. ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಬೆಂಗಳೂರು 38-42 ಅಂಕಗಳ ಅಂತರದಲ್ಲಿ ಸೋಲು ಕಂಡಿತು.
ಇದನ್ನೂ ಓದಿ: ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್
ಆರಂಭದ 4 ನಿಮಿಷದ ಮುನ್ನಡೆ ಸಾಧಿಸಿದ ಬೆಂಗಳೂರು ಬುಲ್ಸ್, ಬಳಿಕ ಪುಣೇರಿ ಆಕ್ರಮಣಕ್ಕೆ ತುತ್ತಾಯಿತು. 6ನೇ ನಿಮಿಷದಲ್ಲಿ ಆಲೌಟ್ ಆಗೋ ಮೂಲಕ 10-6 ಅಂಕಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ಮೊದಲಾರ್ಧದ ಅಂತ್ಯದಲ್ಲಿ 20-15 ಅಂಕಗಳಿಂದ ಹಿನ್ನಡೆಯಲ್ಲಿತ್ತು.
ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...
ದ್ವಿತಿಯಾರ್ಧದಲ್ಲೂ ಬೆಂಗಳೂರು ಬುಲ್ಸ್‌ಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಸೆಕೆಂಡ್ ಹಾಫ್‌ನ 18ನೇ ನಿಮಿಷದಲ್ಲಿ ಪುಣೇರಿ ತಂಡವನ್ನು ಆಲೌಟ್ ಮಾಡಿದರೂ 36-42 ಅಂಕ ಪಡೆಯಿತು. ಆದರೆ ಮುನ್ನಡೆ ಸಾಧ್ಯವಾಗಲಿಲ್ಲ. ಹೀಗಾಗಿ ಅಂತ್ಯದಲ್ಲಿ 38-42 ಅಂಕಗಳಿಂದ ಸೋಲು ಕಂಡಿತು.
ತೆಲುಗು vs ಪಾಟ್ನಾ ಪಂದ್ಯ ಟೈ;
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮುನ್ನ ತೆಲುಗು ಟೈಟಾನ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಿತ್ತು. ರೋಚಕ ಹೋರಾಟ 42-42 ಅಂಕಗಳ ಮೂಲಕ ಟೈಗೊಂಡಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಉಭಯ ತಂಡಗಳು ಸಮಬಲದ ಹೋರಾಟ ನೀಡಿತು. ಮೊದಲಾರ್ಧದ ಅಂತ್ಯದಲ್ಲಿ 19-19 ಅಂಕಗಳಿಂದ ಟೈಗೊಂಡಿತ್ತು. ಇನ್ನು ದ್ವಿತಿಯಾರ್ಧದಲ್ಲೂ ಇದೇ ಪ್ರದರ್ಶನ ಮುಂದುವರಿಯಿತು. ಅಂತ್ಯದಲ್ಲಿ 42-42 ಅಂಕಗಳ ಮೂಲಕ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು.