ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್

ಪ್ರೊ ಕಬಡ್ಡಿ ಟೂರ್ನಿಯಲ್ಲಿ ‘ಕೆ​ಬಿ​ಡಿ ಜೂನಿ​ಯರ್ಸ್’ ಎನ್ನುವ ಹೆಸ​ರಲ್ಲಿ ಶಾಲಾ ಮಕ್ಕಳ ಕಬಡ್ಡಿ ಚಾಂಪಿ​ಯನ್‌ಶಿಪ್‌ ಆಯೋ​ಜಿ​ಸ​ಲಾ​ಗು​ತ್ತಿದೆ. ಇದರ ಉದ್ದೇಶ, ಅನುಕೂಲ, ಆಯ್ಕೆ ಕುರಿತಂತೆ ಸವಿಸ್ತಾರವಾದ ವರದಿ ಇಲ್ಲಿದೆ ನೋಡಿ.. 

KBD Juniors to be a platform for Youth Kabaddi talents

ಬೆಂಗ​ಳೂರು[ಸೆ.14]: ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ, ದೇಸಿ ಕ್ರೀಡೆ ಕಬ​ಡ್ಡಿಗೆ ಆಧು​ನಿಕ ಸ್ಪರ್ಶ ನೀಡಿ ಜಗ​ತ್ಪ್ರ​ಸಿದ್ಧಿ ತಂದು​ಕೊ​ಟ್ಟಿದ್ದು ಪ್ರೊ ಕಬಡ್ಡಿ. ದಿನೇ ದಿನೇ ಕಬಡ್ಡಿ ನೋಡುಗರ ಸಂಖ್ಯೆ ಹೆಚ್ಚು​ತ್ತಿದ್ದು, ಕ್ರೀಡೆಯನ್ನು ವೃತ್ತಿ​ಯಾಗಿ ಸ್ವೀಕ​ರಿ​ಸುವವರ ಸಂಖ್ಯೆಯೂ ಏರು​ತ್ತಿದೆ. ಹೊಸ ಹೊಸ ಪ್ರತಿಭೆಗಳು ದೇಶದ ಮೂಲೆ ಮೂಲೆಯಿಂದ ಹೊರ​ಬ​ರು​ತ್ತಿದ್ದು, ಶಾಲಾ ಮಕ್ಕ​ಳಲ್ಲೇ ಕಬಡ್ಡಿ ಬಗ್ಗೆ ಆಸಕ್ತಿ ಹೆಚ್ಚಿ​ಸಲು ಹಾಗೂ ಅವರಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ನೀಡುವ ಕೆಲಸವನ್ನು ಪ್ರೊ ಕಬಡ್ಡಿ ಆಯೋ​ಜಕರು ಮಾಡು​ತ್ತಿ​ದ್ದಾರೆ.

ಕಳೆದ 3 ವರ್ಷಗ​ಳಿಂದ ‘ಕೆ​ಬಿ​ಡಿ ಜೂನಿ​ಯರ್ಸ್’ ಎನ್ನುವ ಹೆಸ​ರಲ್ಲಿ ಶಾಲಾ ಮಕ್ಕಳ ಕಬಡ್ಡಿ ಚಾಂಪಿ​ಯನ್‌ಶಿಪ್‌ ಆಯೋ​ಜಿ​ಸ​ಲಾ​ಗು​ತ್ತಿದ್ದು, ಸಾವಿ​ರಾರು ಮಕ್ಕಳು ಪಾಲ್ಗೊಂಡಿ​ದ್ದಾರೆ. ಪ್ರೊ ಕಬಡ್ಡಿ ಟೂರ್ನಿ ಜತೆಯಲ್ಲೇ ಈ ಟೂರ್ನಿಯೂ ನಡೆ​ಯ​ಲಿದೆ. ಪ್ರೊ ಕಬಡ್ಡಿ ತಂಡಗಳು ಪ್ರತಿ​ನಿ​ಧಿ​ಸುವ ನಗರಗಳ ಆಯ್ದ ಶಾಲಾ ತಂಡ​ಗಳು ಕೆಬಿಡಿ ಜೂನಿ​ಯರ್ಸ್’ನಲ್ಲಿ ಸ್ಪರ್ಧಿ​ಸ​ಲಿದ್ದು, ನಗರಗಳ ಚಾಂಪಿ​ಯನ್‌ಗಳಾಗಿ ಹೊರ​ಹೊ​ಮ್ಮ​ಲಿವೆ.

PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

3000 ಮಕ್ಕ​ಳು: ಪ್ರತಿ ನಗರದಲ್ಲಿ ಕೆಬಿಡಿ ಜೂನಿ​ಯ​ರ್ಸ್’ಗಾಗಿ ಹಂತ 1, ಹಂತ 2 ಎಂದು ಮಾಡಿಕೊಳ್ಳಲಾಗಿದೆ. ಹಂತ 1ರಲ್ಲಿ 24 ಶಾಲಾ ತಂಡಗಳಿಗೆ ಪ್ರೊ ಕಬಡ್ಡಿ ಸಂಘಟಕರೇ ಆಹ್ವಾನ ನೀಡುತ್ತಾರೆ. ಅದರಲ್ಲಿ ನಗರದ ಟಾಪ್‌ 10 ಶಾಲೆಗಳು ಸೇರಿರಲಿವೆ. ಈ ರೀತಿಯಾಗಿ ದೇಶಾದ್ಯಂತ ಪ್ರತಿ ಆವೃತ್ತಿಯಲ್ಲಿ 228 ಶಾಲೆಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಸುಮಾರು 3000 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ.

ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

ಹಂತ 1ರಲ್ಲಿ 24 ತಂಡಗಳನ್ನು ಎರಡು ವಿಭಾಗಗಳ​ನ್ನಾಗಿ ಮಾಡ​ಲಾ​ಗು​ತ್ತದೆ. ಈ ಹಂತ​ದಿಂದ 2ನೇ ಹಂತ​ಕ್ಕೆ 8 ತಂಡ​ಗ​ಳನ್ನು ಆಯ್ಕೆ ಮಾಡ​ಲಾ​ಗು​ತ್ತದೆ. ಪ್ರೊ ಕಬಡ್ಡಿ ಆರಂಭವಾಗುವ ಎರಡು ತಿಂಗಳು ಮೊದಲೇ ಈ ಕಾರ್ಯ ಪೂರ್ಣ​ಗೊ​ಳ್ಳ​ಲಿದೆ. ಪ್ರೊ ಕಬಡ್ಡಿ ಆರಂಭವಾದ ಮೇಲೆ ಆಯಾ ಚರಣದ ವೇಳೆ ಕೆಬಿಡಿ ಜೂನಿ​ಯ​ರ್ಸ್ ಪಂದ್ಯ​ಗ​ಳನ್ನೂ ಆಡಿ​ಸ​ಲಾ​ಗು​ತ್ತದೆ. ಅಲ್ಲದೇ ಪಂದ್ಯಗಳ ಪ್ರಸಾರವನ್ನೂ ಮಾಡ​ಲಾಗುತ್ತದೆ. ಪ್ರತಿ ನಗರಗ​ಳಲ್ಲಿ ಚಾಂಪಿ​ಯನ್‌ ಆಗುವ ತಂಡ​ಗ​ಳ ನಡುವೆ ರಾಷ್ಟ್ರೀಯ ಚಾಂಪಿ​ಯನ್‌ಶಿಪ್‌ಗೆ ಸ್ಪರ್ಧೆ ನಡೆ​ಯ​ಲಿದೆ.

ಉದ್ದೇಶ​ವೇ​ನು?: ಕೆಬಿಡಿ ಜೂನಿ​ಯ​ರ್ಸ್ ಟೂರ್ನಿಯ ಮುಖ್ಯ ಉದ್ದೇಶ ಕಬಡ್ಡಿ ಕ್ರೀಡೆಯನ್ನು ಜನಪ್ರಿಯಗೊಳಿಸುವುದು. ಹೆಚ್ಚಿನ ಜನರನ್ನು ಕ್ರೀಡೆಯತ್ತ ಆಕ​ರ್ಷಿ​ಸು​ವುದು. ಭವಿಷ್ಯದ ಕಬಡ್ಡಿ ಪ್ರತಿಭೆಗಳನ್ನು ಹುಡುಕಿ, ಅವ​ರನ್ನು ಬೆಳೆಸುವುದು. ಸಾಮಾನ್ಯವಾಗಿ ನಗರ ಭಾಗದ ಶಾಲಾ ಮಕ್ಕಳು ಕ್ರಿಕೆಟ್‌, ಟೆನಿಸ್‌, ಬ್ಯಾಡ್ಮಿಂಟನ್‌ನಂತಹ ಕ್ರೀಡೆಗಳತ್ತ ಆಕರ್ಷಿತ​ರಾ​ಗಿ​ರು​ತ್ತಾರೆ. ಅಂತಹ ಮಕ್ಕಳನ್ನು ಕಬಡ್ಡಿಯತ್ತ ಸೆಳೆಯುವ ಉದ್ದೇಶವೂ ಇದರಲ್ಲಿ ಅಡಗಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ಕೌಶಲ್ಯ, ಧೈರ್ಯ ವೃದ್ಧಿಗೆ ಈ ಟೂರ್ನಿ ನೆರ​ವಾ​ಗ​ಲಿದೆ.

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಗ್ರಾಮೀಣ ಶಾಲೆಗಳತ್ತಲೂ ಗಮ​ನ: ಕಳೆದ ಎರಡು ಆವೃತ್ತಿಯಲ್ಲಿ ಕೇವಲ ನಗರ ಪ್ರದೇಶದ ಶಾಲೆಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ತಾಲೂಕು ಕ್ಷೇತ್ರಗಳಲ್ಲಿರುವ ಕೆಲವು ಶಾಲೆಗಳು ಸ್ವಯಂ ಇಚ್ಛೆಯಿಂದ ಬಂದು ಭಾಗವಹಿಸಿವೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಅರವಿಂದ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಮತ್ತು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಎಲ್‌ಇ ಶಾಲೆಗಳು ಬೆಂಗ​ಳೂರು ಚರಣದಲ್ಲಿ ಆಡಿ​ದ್ದ​ವು. ಮುಂದಿನ ಆವೃತ್ತಿಗಳಲ್ಲಿ ಗ್ರಾಮೀಣ ಶಾಲೆಗಳಿಗೆ ಆದ್ಯತೆ ನೀಡುವ ಬಗ್ಗೆ ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಬಿಡಿ ಜೂನಿಯರ್‌ 2017ರಲ್ಲಿ ಆರಂಭವಾಗಿದ್ದರೂ ಬೆಂಗಳೂರಿಗೆ ಇದು ಎರಡನೇ ಆವೃತ್ತಿ. ಕ್ರೀಡಾಂಗಣದ ಸಮಸ್ಯೆಯಿಂದ 2017ರಲ್ಲಿ ನಡೆದಿರಲಿಲ್ಲ. ಈ ಬಾರಿ ಪ್ರೊ ಕಬಡ್ಡಿ ಆರಂಭಕ್ಕೂ ಎರಡು ತಿಂಗಳು ಮುನ್ನವೇ ನಗರದ ಟಾಪ್‌ 10 ಶಾಲೆಗಳು ಸೇರಿದಂತೆ 24 ತಂಡಗಳಿಗೆ ಆಹ್ವಾನ ನೀಡಲಾಗಿತ್ತು. ಇವುಗಳಲ್ಲಿ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌, ಅರವಿಂದ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌, ರಾಯಲ್‌ ಕಾನಕೋರ್ಡೆ ಕಲ್ಯಾಣ ನಗರ, ಶ್ರೀಚೈತನ್ಯ ಎಚ್‌ಎಸ್‌ಆರ್‌, ಕೆಎಲ್‌ಇ ಸ್ಕೂಲ್‌, ಡಿಪಿಎಸ್‌ ನಾರ್ಥ್, ವಿಎಸ್‌ಎಸ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಲಾರೆನ್ಸ್‌ ಹೈಸ್ಕೂಲ್‌ ತಂಡಗಳು 2ನೇ ಹಂತಕ್ಕೆ ಆಯ್ಕೆಯಾಗಿದ್ದವು. ಪ್ರೊ ಕಬಡ್ಡಿಯ ಬೆಂಗಳೂರು ಚರಣ ನಡೆಯುವ ಸಂದರ್ಭದಲ್ಲಿಯೇ ಕೆಬಿಡಿ ಜೂನಿ​ಯ​ರ್ಸ್ ಸಹ ನಡೆ​ಯಿತು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ ಪಂದ್ಯದಲ್ಲಿ ಶ್ರೀಚೈತನ್ಯ ಎಚ್‌ಎಸ್‌ಆರ್‌ ತಂಡ 22-21ರಿಂದ ಅರವಿಂದ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ತಂಡದ ವಿರುದ್ಧ ಗೆದ್ದು, ಬೆಂಗಳೂರು ಚರಣದಲ್ಲಿ ಚಾಂಪಿಯನ್‌ ಆಯಿತು.

‘ಕಬಡ್ಡಿ ಜನಪ್ರಿಯತೆಯನ್ನು ಹೆಚ್ಚಿಸಲು ಕೆಬಿಡಿ ಜೂನಿಯ​ರ್ಸ್ ನೆರ​ವಾ​ಗು​ತ್ತಿದೆ. ಮಕ್ಕಳು ಸಹ ವೃತ್ತಿಪರ ಆಟಗಾರರಂತೆ ಆಡುತ್ತಾರೆ. ಅದರಲ್ಲಿಯೂ ವಿಶೇಷವಾಗಿ ತಾರಾ ಆಟಗಾರರಾದ ಪ್ರದೀಪ್‌ ನರ್ವಾಲ್‌, ರಾಹುಲ್‌ ಚೌಧರಿಯ ಅವರನ್ನು ಮಕ್ಕಳು ಅನುಕರಿಸುವುದನ್ನು ನೋಡಿದ್ದೇನೆ. ಕೆಬಿಡಿ ಜೂನಿ​ಯ​ರ್ಸ್’ನಲ್ಲಿ ಗ್ರಾಮೀಣ ಭಾಗದ ಶಾಲೆಗಳು ಸ್ಪರ್ಧಿಸುವಂತಾಗಬೇಕು ಎನ್ನುವುದೇ ನನ್ನ ಆಶಯ.‘

-ಡಾ. ಶಿವಣ್ಣ ಎನ್‌.ಕೆ, ಕೆಬಿಡಿ ಜೂನಿ​ಯ​ರ್ಸ್ ತಾಂತ್ರಿಕ ಸಮಿತಿ ಉಸ್ತುವಾರಿ

ವರದಿ: ಮಂಜು ಮಳಗುಳಿ

Latest Videos
Follow Us:
Download App:
  • android
  • ios