Asianet Suvarna News Asianet Suvarna News

ಸ್ವತಃ ನೀರಜ್ ಚೋಪ್ರಾ ಬಂದ್ರೂ ಅಭ್ಯಾಸಕ್ಕೆ ಅವಕಾಶ ಇಲ್ಲ, ಏನಿದು ಕಂಠೀರವ ಕ್ರೀಡಾಂಗಣದ ವಿವಾದ!

ಕಂಠೀರವ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್‌ಗೆ ತೆರಳಿದ ಕರ್ನಾಟಕದ ಜಾವೆಲಿನ್ ಪಟು ಮನು ಹಾಗೂ ಕೋಚ್ ಕಾಶಿನಾಥ್ ನಾಯ್ಕ್‌ಗೆ ಅವಕಾಶ ನೀಡಿಲ್ಲ ಅನ್ನೋ ವಿವಾದ ಹುಟ್ಟಿಕೊಂಡಿದೆ. ಈ ಕುರಿತು  ಅಸಿಸ್ಟೆಂಟ್ ಡೈರೆಕ್ಟರ್ ಸತ್ಯನಾರಾಯಣ ನೀಡಿರುವ ಹೇಳಿಕೆ ಬಾರಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಈ ವಿವಾದಕ್ಕೆ ಕಾರಣವೇನು? ಅಸಲಿಗೆ ನಡೆದಿದ್ದು ಏನು?

Practice denied sree kanteerava stadium javelin coach kashinath allegations and clarification by satyanarayan ckm
Author
First Published Oct 13, 2022, 9:29 PM IST

ಬೆಂಗಳೂರು(ಅ.13):  ಉದ್ಯಾನ ನಗರಿ ಬೆಂಗಳೂರು ಒಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ಸಜ್ಜಾಗಿದೆ. ಆದರೆ ಚಾಂಪಿಯನ್‌ಶಿಪ್ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಹೊಸ ವಿವಾದ ಹುಟ್ಟಿಕೊಂಡಿದೆ. ಕರ್ನಾಟಕದ ಜಾವಲಿನ್ ಪಟು ಡಿಪಿ ಮನು, ಕೋಚ್ ಕಾಶಿನಾಥ್ ನಾಯ್ಕ್‌ಗೆ ಅಭ್ಯಾಸ ಮಾಡಲು ಅವಕಾಶ ನೀಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಈ ಕುರಿತು ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ನೀವಲ್ಲ, ಸ್ವತಃ ನೀರಜ್ ಚೋಪ್ರಾ ಈಗ ಅಭ್ಯಾಸ ಮಾಡಲು   ಬಂದರೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಂಠೀರವ ಸಿಬ್ಬಂಧಿ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಆದರೆ ಅಕ್ಟೋಬರ್ 15 ರಿಂದ 19ರವರೆಗೆ ನಡೆಯಲಿರುವ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಈ ಕಾರಣಕ್ಕಾಗಿ ಸಜ್ಜುಗೊಳಿಸಿರುವ ಮೈದಾನದಲ್ಲಿ ಯಾರಿಗೂ ಅಭ್ಯಾಸಕ್ಕೆ ಅವಕಾಶವಿಲ್ಲ. ಹೀಗಾಗಿ ನಿರಾಕರಿಸಲಾಗಿದೆ ಎಂದು ಸ್ವತಃ ಸತ್ಯನಾರಾಯಣ ಸ್ಪಷ್ಟನೆ ನೀಡಿದ್ದಾರೆ.

ಡಿಪಿ ಮನು ಕರ್ನಾಟಕದ ಪ್ರತಿಭಾನ್ವಿತ ಜಾವಲಿನ್ ಪಟು. ಇನ್ನು ಕೋಚ್ ಕಾಶಿನಾಥ್ ನಾಯ್ಕ್ ಭಾರತದ ಗೋಲ್ಡ್ ಮೆಡಲಿಸ್ಟ್ ನೀರಜ್ ಜೋಪ್ರಾಗೂ ಕೋಚ್ ಆಗಿದ್ದಾರೆ. ಒಪನ್ ಅಥ್ಲೆಟಿಕ್ಸ್ ಕೂಟಕ್ಕಾಗಿ ಅಭ್ಯಾಸ ಮಾಡಲು ಕಂಠೀರವ ಕ್ರೀಡಾಂಗಣ ನೀಡಿಲ್ಲ ಅನ್ನೋ ಆರೋಪ ಮನು ಹಾಗೂ ಕಾಶಿನಾಥ್ ನಾಯ್ಕ್ ಅವರದ್ದು. ನಮಗೆ ಈ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕಾಶಿನಾಥ್ ಹೇಳಿದ್ದಾರೆ. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸತ್ಯನಾರಾಯಣ, ಮನು ನಮಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಕಾಶಿನಾಥ್, ಮನು ಸೇರಿ ಯಾರಿಗೂ ಕೊಡುತ್ತಿಲ್ಲ ಎನ್ನುತ್ತಿದ್ದಾರೆ ಎಂದಿದ್ದಾರೆ. ಪ್ರತ್ಯುತ್ತರ ನೀಡಿದ ಕಾಶಿನಾಥ್ ಮನು ಅಲ್ಲ, ಸ್ವತಃ ಕಾಶಿನಾಥ್ ಬಂದರೂ ಈಗ ಅಭ್ಯಾಸಕ್ಕೆ ಅವಕಾಶ ಇಲ್ಲ. ಯಾಕೆಂದರೆ 15 ರಿಂದ ಮಾತ್ರ ಈ ಕ್ರೀಡಾಂಗಣ ಬಳಸಲು ಅವಕಾಶವಿದೆ. ಮನು ಹಾಗೂ ಕಾಶಿನಾಥ್ ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದಾರೆ ಎಂದು ಸತ್ಯನಾರಾಯಣ ಹೇಳಿದ್ದಾರೆ. 

ಕಂಠೀರವ ಕ್ರೀಡಾಂಗಣ ಅಥ್ಲೇಟಿಕ್ಸ್ ಸ್ಟೇಡಿಯಂ, ಕ್ರೀಡಾಪಟುಗಳು ಭಾರತದ ಎಲ್ಲೆ ಹೋದರೂ ಅಥ್ಲೇಟಿಕ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಅವಕಾಶವಿದೆ. ಈಗ ನಾವು ಇದೀಗ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅಭ್ಯಾಸ ಮಾಡಬೇಕಿದೆ. ಈ ಕ್ರೀಡಾಂಗಣದಲ್ಲಿ ನಾನು ಕ್ರೀಡಾಪಟುವಾಗಿ ಅದೆಷ್ಟು ಬಾರಿ ಆಡಿದ್ದೇನೆ, ಅಭ್ಯಾಸ ಮಾಡಿದ್ದೇನೆ ಅನ್ನೋದು ಲೆಕ್ಕವಿಲ್ಲ. ಕೋಚ್ ಆಗಿಯೂ ಹಲವು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೇನೆ. ಇಷ್ಟು ವರ್ಷ ನಮಗೆ ಈ ರೀತಿಯ ಸಮಸ್ಯೆ ಆಗಿಲ್ಲ. ನಾವು ನಾವು ಕರ್ನಾಟಕದವರೇ ಆದರೂ ನಮಗೆ ಈ ರೀತಿಯ ಸಮಸ್ಯೆ ಆಗುತ್ತಿದೆ. ಕರ್ನಾಟಕದಲ್ಲಿರುವ ಕ್ರೀಡಾಂಗಣದಲ್ಲಿ ಕರ್ನಾಟಕದವರಿಗೆ ಅವಕಾಶ ನೀಡಿಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು? ಇಷ್ಟೇ ಅಲ್ಲ ನೀರಜ್ ಚೋಪ್ರಾ ಬಂದರೂ ಅಭ್ಯಾಸಕ್ಕೆ ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ ಅಂದರೆ ಅವರೆಷ್ಟು ದಾದಾಗಿರಿ ಮಾಡುತ್ತಿದ್ದಾರೆ ಅನ್ನೋದು ಕಾಣಿಗೆ ರಾಚುವಂತಿದೆ ಎಂದು ಕೋಚ್ ಕಾಶಿನಾಥ್ ನಾಯ್ಕ್ ಹೇಳಿದ್ದಾರೆ.

ಇದು ದೌರ್ಭಾಗ್ಯದ ವಿಚಾರ. ನಾನು ಕರ್ನಾಟಕದವನು. ಮನು ಕೂಡ ಕರ್ನಾಟಕದನು. ಜಾವಲಿನ್‌ನಲ್ಲಿ ಮನು ಭಾರತದ ಎರಡನೇ ಶ್ರೇಯಾಂಕಿತ ಪಟು. ನೀರಜ್ ಚೋಪ್ರಾ ನಂತರದ ಸ್ಥಾನವನ್ನು ಮನು ಅಲಂಕರಿಸಿದ್ದಾರೆ. ಮೊದಲ ಬಾರಿಗೆ ಮನು ಕಂಠೀರವ ಕ್ರೀಡಾಂಗಣಕ್ಕೆ ಬಂದಾಗ ಪ್ರಾಕ್ಟೀಸ್‌ಗೆ ಅವಕಾಶ ನೀಡಿಲ್ಲ ಅಂದರೆ ಇವರಿಗೆ ಮೆಡಲ್ ಬೇಕಾ ಇಲ್ಲಾ ಹಣ ಬೇಕಾ, ನಮಗೆ ಅರ್ಥವಾಗುತ್ತಿಲ್ಲ. ನಾವು ಯಾವತ್ತೂ ಬರುವುದಿಲ್ಲ. ಸ್ಪರ್ಧೆ ಇದೆ ಆ ಕಾರಣಕ್ಕೆ ಬಂದಿದ್ದೇವೆ. ನಮಗೆ ಅವಕಾಶ ನಿರಾಕರಿಸಿದ್ದಾರೆ ಅಂದರೆ ಇವರಿಗೆ ಏನು ಹೇಳಬೇಕು? ಎಂದು ಕಾಶಿನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಮನು

ನಿಯಮದ ಪ್ರಕಾರ ಅಥ್ಲೆಟಿಕ್ಸ್‌ಗಾಗಿ ಸಜ್ಜುಗೊಳಿಸಿರುವ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶವಿಲ್ಲ. ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಮನು ಹಾಗೂ ಕಾಶಿನಾಥ್ ಅವಕಾಶ ಕೋರಿದ್ದಾರೆ. ಆದರೆ ಅಕ್ಟೋಬರ್ 15ರಿಂದ ಕ್ರೀಡಾಕೂಟ ಆಯೋಜನೆಯಾಗುತ್ತಿದೆ. ಈ ಕ್ರೀಡಾಂಗಣವನ್ನು ಅ.15 ರಿಂದ ಬಳಸಲು ಅನುಮತಿ ಇದೆ. ಅದಕ್ಕೂ ಮುನ್ನ ಯಾವುದೇ ಅಭ್ಯಾಸಕ್ಕೆ ಅವಕಾಶವಿಲ್ಲ. ಈ ನಿಯಮದಲ್ಲಿ ಯಾವುದೇ ಸಡಿಲಿಕೆ ಇಲ್ಲ. ಈಗ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರೆ ಒಪನ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಅವಕಾಶ ನಿರಾಕರಿಸಲಾಗಿದೆ. ಇದು ನನ್ನ ಅಥವಾ ಕಂಠೀರವದ ನಿಯಮವಲ್ಲ. ಯಾವುದೇ ಕ್ರೀಡೆಯಲ್ಲೂ ಇದೇ ನಿಯಮ. ಕ್ರಿಕೆಟ್ ಆಯೋಜನೆ ಮಾಡುವ ಕ್ರೀಡಾಂಗಣದ ಪಿಚ್‌ನಲ್ಲಿ ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕೆ ಅವಕಾಶವಿಲ್ಲ. ವಿಂಬಲ್ಡನ್ ಆಗಿರಲಿ, ಯಾವುದೇ ಕ್ರೀಡೆಯಾಗಿರಲಿ ಪಂದ್ಯಕ್ಕೂ ಮುನ್ನ ಅದೇ ಪಿಚ್‌ನಲ್ಲಿ ಅವಕಾಶವಿಲ್ಲ. ಇದನ್ನೇ ನಾನು ಹೇಳಿದ್ದೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸತ್ಯನಾರಾಯಣ ಸ್ಪಷ್ಪಡಿಸಿದ್ದಾರೆ. 

ಕಾಶಿನಾಥ್, ಮನು ಅಭ್ಯಾಸಕ್ಕೆ ಮೈದಾನದ ಬೇಕು ಎಂದು ಅಧಿಕೃತ ಮನವಿ ಮಾಡಿದರೆ ನಾವು ಬೇರೆಡೆ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ. ಯಾರಿಗೆಲ್ಲಾ ಅಭ್ಯಾಸಕ್ಕೆ ಮೈದಾನದ ಅವಶ್ಯಕತೆ ಇದೆ. ಅವರ ಕ್ರೀಡೆ ಹಾಗೂ ಇತರ ಸ್ಪರ್ಧಿಗಳ ಮನವಿಗಳ ಆಧರಿಸಿ ಅವರಿಗೆ ಸಮಯವನ್ನು ನಿಗದಿಪಡಿಸುತ್ತೇವೆ. ಆದರೆ ಇಲ್ಲಿ ಏಕಾಏಕಿ ಬಂದು ಅಥ್ಲೆಟಿಕ್ಸ್ ಆಯೋಜನೆ ಮಾಡಿರುವ ಮೈದಾನದಲ್ಲೇ ಅಭ್ಯಾಸಕ್ಕೆ ಅವಕಾಶ ಕೇಳಿದ್ದಾರೆ.  ಇದು ಹೇಗೆ ಸಾಧ್ಯ? ಇದು ನಿಯಮದಲ್ಲೇ ಇಲ್ಲ. ಕಾರಣ ಟೂರ್ನಿ ಆಯೋಜನೆಗಳೊಳ್ಳುತ್ತಿರುವ ಮೈದಾನದಲ್ಲಿ ಅಭ್ಯಾಸದಿಂದ ಏನಾದರೂ ಸಮಸ್ಯೆಯಾದರೆ ಸಿಂಥೆಟಿಕ್ಸ್ ಇರಬಹುದು ಅಥವಾ ಇನ್ಯಾವುದೇ ವ್ಯವಸ್ಥೆಯನ್ನು ಬದಲಿಸುವ ಅಥವಾ ಹೊಸದಾಗಿ ಹಾಕಲು ಸಮಯವಕಾಶವಿರುವುದಿಲ್ಲ. ಇದು ಕ್ರೀಡಾಕೂಟ ಆಯೋಜನೆಗೆ ಸಮಸ್ಯೆಯಾಗಲಿದೆ. ಹೀಗಾಗಿಯೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನೀರಜ್ ಜೋಪ್ರಾ ಆಗಿಲಿ, ಇನ್ಯಾವುದೇ ಜ್ಯೂನಿಯರ್ ಕ್ರೀಡಾಪಟು ಆಗಿರಲಿ, ನಿಯಮ ಎಲ್ಲರಿಗೂ ಒಂದೇ ಎಂದು ಸತ್ಯನಾರಾಯಣ ಹೇಳಿದ್ದಾರೆ.

Follow Us:
Download App:
  • android
  • ios