ಪ್ರೊ ಕಬಡ್ಡಿಯಲ್ಲಿ ಅತೀ ಹೆಚ್ಚು ರೈಡ್‌ ಅಂಕಗಳ ದಾಖಲೆ ಹೊಂದಿರುವ ಪ್ರದೀಪ್‌, 3 ಬಾರಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಡಿ.2ರಂದು ಪ್ರೊ ಕಬಡ್ಡಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಆಡುವ ಮೂಲಕ ಯು.ಪಿ. ಯೋಧಾಸ್‌ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ನವದೆಹಲಿ: ತಾರಾ ಕಬಡ್ಡಿ ಆಟಗಾರ ಪ್ರದೀಪ್‌ ನರ್ವಾಲ್‌ ಮುಂದಿನ ತಿಂಗಳು ಆರಂಭಗೊಳ್ಳಲಿರುವ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು.ಪಿ. ಯೋಧಾಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನು ಭಾನುವಾರ ಫ್ರಾಂಚೈಸಿ ಖಚಿತಪಡಿಸಿದೆ.

ಪ್ರೊ ಕಬಡ್ಡಿಯಲ್ಲಿ ಅತೀ ಹೆಚ್ಚು ರೈಡ್‌ ಅಂಕಗಳ ದಾಖಲೆ ಹೊಂದಿರುವ ಪ್ರದೀಪ್‌, 3 ಬಾರಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಡಿ.2ರಂದು ಪ್ರೊ ಕಬಡ್ಡಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಆಡುವ ಮೂಲಕ ಯು.ಪಿ. ಯೋಧಾಸ್‌ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ಸ್ಪಾನಿಷ್‌ ಓಪನ್‌ ಗಾಲ್ಫ್‌: ರಾಜ್ಯದ ಅದಿತಿಗೆ ಪ್ರಶಸ್ತಿ

ಮ್ಯಾಡ್ರಿಡ್‌: ಭಾರತದ ತಾರಾ ಗಾಲ್ಫ್‌ ಪಟು, ಕರ್ನಾಟಕದ ಅದಿತಿ ಅಶೋಕ್‌ ಸ್ಪಾನಿಷ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರು 17 ಅಂಕಗಳ ಅಂತರದಲ್ಲಿ ಗೆದ್ದು ಚಾಂಪಿಯನ್‌ ಎನಿಸಿಕೊಂಡರು. ಇದು ಅವರಿಗೆ ಈ ವರ್ಷದ 2ನೇ ಎಲ್‌ಇಟಿ(ಲೇಡಿಸ್‌ ಯುರೋಪಿಯನ್‌ ಟೂರ್‌) ಪ್ರಶಸ್ತಿಯಾಗಿದ್ದು, ಈಗಾಗಲೇ ಕೀನ್ಯಾ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದರು.

ರಾಷ್ಟ್ರೀಯ ಹಾಕಿ: ಇಂದು ಕರ್ನಾಟಕ-ಪಂಜಾಬ್‌ ಸೆಮಿ

ಚೆನ್ನೈ: ಹಾಕಿ ಇಂಡಿಯಾ ಆಯೋಜಿಸುತ್ತಿರುವ 13ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ನಲ್ಲಿ ಸೋಮವಾರ 3 ಬಾರಿ ಚಾಂಪಿಯನ್‌ ಪಂಜಾಬ್‌ ವಿರುದ್ಧ ಸೆಣಸಾಡಲಿದೆ. 2011ರ ರನ್ನರ್‌-ಅಪ್‌ ಕರ್ನಾಟಕ 4 ಬಾರಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ದಶಕಗಳ ಬಳಿಕ ಮತ್ತೊಮ್ಮೆ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ.

ಚೀನಾ ಮಾಸ್ಟರ್ಸ್‌: ಸಾತ್ವಿಕ್‌-ಚಿರಾಗ್‌ ರನ್ನರ್‌-ಅಪ್‌

ಗುಂಪು ಹಂತದಲ್ಲಿ ಅಜೇಯವಾಗಿದ್ದ ಕರ್ನಾಟಕ, ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಜಾರ್ಖಂಡ್‌ ವಿರುದ್ಧ 4-1 ಗೋಲುಗಳಿಂದ ಭರ್ಜರಿ ಜಯಗಳಿಸಿತ್ತು. ಭಾರತದ ನಾಯಕ ಹರ್ಮನ್‌ಪ್ರೀತ್‌ ಮುನ್ನಡೆಸುತ್ತಿರುವ ಪಂಜಾಬ್‌ ಪಂಜಾಬ್‌ ಕೂಡಾ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದು, ಕ್ವಾರ್ಟರ್‌ನಲ್ಲಿ ಮಣಿಪುರವನ್ನು ಮಣಿಸಿದೆ. ಸೋಮವಾರ ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಹರ್ಯಾಣ- ಕಳೆದ ಬಾರಿ ರನ್ನರ್‌-ಅಪ್‌ ತಮಿಳುನಾಡು ಮುಖಾಮುಖಿಯಾಗಲಿವೆ.

ಕರ್ನಾಟಕ-ಪಂಜಾಬ್ ಪಂದ್ಯ: ಸಂಜೆ 3.30ಕ್ಕೆ

ವನಿತಾ ಫುಟ್ಬಾಲ್‌: ರಾಜ್ಯಕ್ಕೆ ಇಂದು ಚಂಡೀಗಢ ಸವಾಲು

ಬೆಂಗಳೂರು: 203-24ರ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ, ಸೋಮವಾರ ಚಂಡೀಗಢ ವಿರುದ್ಧ ಸೆಣಸಾಡಲಿದೆ. ತನ್ನ ಪಂದ್ಯಗಳನ್ನು ತವರಿನಲ್ಲೇ ಆಡುತ್ತಿರುವ ಕರ್ನಾಟಕ ‘ಸಿ’ ಗುಂಪಿನಲ್ಲಿ ಮೊದಲೆರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಆರಂಭಿಕ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಗೆದ್ದಿದ್ದರೆ, 2ನೇ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಸೋಲಿಸಿತ್ತು. ತಂಡ ಗುಂಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಚಂಡೀಗಢ 2 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಹರಾಜಿಗೂ ಮೊದಲು ಹಲವು ಟ್ವಿಸ್ಟ್, 10 ತಂಡದಲ್ಲಿ ಉಳಿದಿರುವ-ಹೊರಬಿದ್ದ ಆಟಾಗಾರರ ಫುಲ್ ಲಿಸ್ಟ್!

ಪಂದ್ಯ: ಸಂಜೆ 3.30ಕ್ಕೆ

ಈಜು: ಮತ್ತೆ ಚಿನ್ನದ ಪದಕ ಜಯಿಸಿದ ರಾಜ್ಯದ ಶ್ರೀಹರಿ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ(ಎನ್‌ಎಸಿ) ಆಯೋಜಿಸುತ್ತಿರುವ 2ನೇ ಆವೃತ್ತಿಯ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್‌ ಮತ್ತೆ ಚಿನ್ನದ ಪದಕ ಗೆದ್ದಿದ್ದಾರೆ. 50 ಮೀ ಫ್ರೀಸ್ಟೈಲ್ ಸ್ಕಿನ್ಸ್‌ನಲ್ಲಿ ಶ್ರೀಹರಿಗೆ ಚಿನ್ನ ಲಭಿಸಿತು. 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಹಾಗೂ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಕಿನ್ಸ್‌ನಲ್ಲಿ ಲಿಖಿತ್‌, 100 ಮೀ ಫ್ರೀಸ್ಟೈಲ್‌ನಲ್ಲಿ ಆನಂದ್ ಬಂಗಾರ ಜಯಿಸಿದರು. ಮಹಿಳೆಯರ ವಿಭಾಗದ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಹರ್ಷಿತಾ ಜಯರಾಮ್, 400 ಮೀ. ಫ್ರೀಸ್ಟೈಲ್‌ನಲ್ಲಿ ಅನುಮತಿ ಚೌಗುಲೆ, 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಕಿನ್ಸ್‌ನಲ್ಲಿ ಹರ್ಷಿತಾ, 50 ಮೀ. ಫ್ರೀಸ್ಟೈಲ್ ಸ್ಕಿನ್ಸ್‌ನಲ್ಲಿ ವಿನಿತಾ ನಯನಾ ಚಿನ್ನ ಸಂಪಾದಿಸಿದರು.