ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚಿಸಲು ಹೋದ ಸಹಾಯಕ ಸಿಬ್ಬಂಧಿ ಭಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಇಮ್ರಾನ್ ಅಸಿಸ್ಟೆಂಟ್ ಮಾಡಿದ ತಪ್ಪಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾ

ಇಸ್ಲಾಮಾಬಾದ್(ಜೂ.23): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಕ್ರಿಕೆಟ್ ತಂಡ, ನಾಯಕ ಸರ್ಫರಾಜ್ ಇತ್ತೀಚೆಗೆ ಟ್ರೋಲಿಗರ ಆಹಾರವಾಗುತ್ತಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನ ಬಳಿಕ ಸರ್ಫರಾಜ್ ಖಾನ್ ಟೀಕೆ ಎದುರಿಸಿದರೆ, ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಟೀಕೆ ಎದುರಿಸಿದ್ದರು. ಇದೀಗ ಇಮ್ರಾನ್ ಖಾನ್ ಸಹಾಯಕ ಸಿಬ್ಬಂಧಿ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಆಫ್ಘನ್ ವಿರುದ್ಧ ಪರದಾಡಿ ಗೆದ್ದ ಬೆನ್ನಲ್ಲೇ ನಾಯಕ ಕೊಹ್ಲಿಗೆ ಬಿತ್ತು ಬರೆ!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ರೇಷ್ಠ ಕ್ರಿಕೆಟಿಗ ಅನ್ನೋದರಲ್ಲಿ ಎರಡು ಮಾತಿಲ್ಲ. 1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಪಾಕ್ ಪ್ರಧಾನಿಯನ್ನು ಮೆಚ್ಚಿಸಲು ಹೋದ ಸಹಾಯಕ ಸಿಬ್ಬಂಧಿ ನಯೀಮ್ ಉಲ್ ಹಕ್, ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. 1969ರಲ್ಲಿ ಇಮ್ರಾನ್ ಖಾನ್, ಎಂದು ಬರೆದಿರುವ ನಯೀಮ್, ಇಮ್ರಾನ್ ಬದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಫೋಟೋ ಹಾಕಿದ್ದಾರೆ.

Scroll to load tweet…

ಇದನ್ನೂ ಓದಿ: ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!

ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 1971ರಲ್ಲಿ. ಆದರೆ ನಯೀಮ್ 1969ರಲ್ಲಿ ಇಮ್ರಾನ್ ಎಂದು, ತೆಂಡುಲ್ಕರ್ ಫೋಟೋ ಹಾಕಿ ಟ್ರೋಲ್ ಆಗಿದ್ದಾರೆ.


Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…