ಕರಾಚಿ(ಫೆ.14): ಅಂಡರ್‌-19 ಹಾಗೂ ‘ಎ’ ತಂಡದ ಕೋಚ್‌ ಸ್ಥಾನಕ್ಕೆ ತಾರಾ ಕ್ರಿಕೆಟಿಗರನ್ನು ಆಯ್ಕೆ ಮಾಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ನಿರ್ಧರಿಸಿದೆ. 

KL ರಾಹುಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು..?

ದಿಗ್ಗಜ ಆಟಗಾರ ರಾಹುಲ್‌ ದ್ರಾವಿಡ್‌ರನ್ನು ಕಿರಿಯರ ತಂಡದ ಕೋಚ್‌ ಆಗಿ ನೇಮಿಸಿ ಯಶಸ್ಸು ಕಂಡಿರುವ ಬಿಸಿಸಿಐನಿಂದ ಸ್ಫೂರ್ತಿ ಪಡೆದು ಪಿಸಿಬಿ ಈ ಕ್ರಮಕ್ಕೆ ಮಂದಾಗಿದೆ. ಪಾಕಿಸ್ತಾನ ಅಂಡರ್‌-19 ಕೋಚ್‌ ಆಗಿ ಕಾರ್ಯನಿರ್ವಹಿಸಲು ಮಾಜಿ ಕ್ರಿಕೆಟಿಗ ಯೂನಿಸ್‌ ಖಾನ್‌ ಆಸಕ್ತಿ ತೋರಿದ್ದಾರೆ ಎನ್ನಲಾಗಿದ್ದು, ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಹುದ್ದೆಗೇರುವುದಾಗಿ ಹೇಳಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಕ್ರಿಕೆಟಿಗರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆ: ಬಿಸಿಸಿಐಗೆ ದ್ರಾವಿಡ್‌ ಸಲಹೆ

ರಾಹುಲ್ ದ್ರಾವಿಡ್ ಭಾರತ ’ಎ’ ಹಾಗೂ ಅಂಡರ್-19 ತಂಡದ ಕೋಚ್ ಆಗಿದ್ದು, 2018ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದ್ರಾವಿಡ್ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ, ಶುಭ್’ಮನ್ ಗಿಲ್, ಮಯಾಂಕ್ ಅಗರ್’ವಾಲ್ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ.