ನವದೆಹಲಿ: ಭಾರತದಲ್ಲಿ ಕ್ರಿಕೆಟನ್ನೇ ವೃತ್ತಿಯಾಗಿ ಸ್ವೀಕರಿಸುವವರು ಹಲವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೇ ಕ್ರಿಕೆಟ್‌ನತ್ತ ವಾಲುವ ಆಟಗಾರರೇ ಹೆಚ್ಚು. ಅವರಿಗೆ ಸರಿಯಾದ ಶೈಕ್ಷಣಿಕ ಹಿನ್ನೆಲೆ ಇರುವುದಿಲ್ಲ. ಕ್ರಿಕೆಟ್‌ಗೆ ಕಾಲಿಡುವ ಎಲ್ಲಾ ಆಟಗಾರರು ಯಶಸ್ಸು ಪಡೆಯುವುದಿಲ್ಲ. ಹೀಗಾಗಿ ಕ್ರಿಕೆಟ್‌ನಿಂದ ದೂರವಾದ ಬಳಿಕ ಇಲ್ಲವೇ ನಿವೃತ್ತಿ ಬಳಿಕ ಆಟಗಾರರಿಗೆ ಪರ್ಯಾಯ ಉದ್ಯೋಗ ಪಡೆಯಲು ನೆರವು ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. 

ರಾಹುಲ್ ದ್ರಾವಿಡ್ ಗೆ 20 ವರ್ಷದ ಯುವತಿ ಪ್ರಪೋಸ್ ಮಾಡಿದಾಗ...!

ಇತ್ತೀಚೆಗೆ ನಡೆದ ಬಿಸಿಸಿಐ ಸಭೆಯಲ್ಲಿ ಭಾರತ ಅಂಡರ್‌-19 ಹಾಗೂ ‘ಎ’ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಪ್ರಸ್ತಾಪಿಸಿದ್ದಾರೆ. ಆಟಗಾರರಿಗೆ ಕ್ರೀಡೆ ಹೊರತು ಪಡಿಸಿ ಇತರ ಕ್ಷೇತ್ರಗಳಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ದ್ರಾವಿಡ್‌ ಸಲಹೆ ನೀಡಿದರು ಎಂದು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಏಕದಿನ ವಿಶ್ವಕಪ್‌: ಭಾರತಕ್ಕೆ ಕಿವೀಸ್‌, ಬಾಂಗ್ಲಾ ವಿರುದ್ಧ ಅಭ್ಯಾಸ

ಒಂದೊಮ್ಮೆ ಆಟಗಾರರಿಗೆ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಕಷ್ಟವಾದರೆ ಅವರಿಗೆ ಪರ್ಯಾಯ ಉದ್ಯೋಗ ಕೊಡಿಸಲು ಬಿಸಿಸಿಐ ಕೆಲ ಪ್ಲೇಸ್‌ಮೆಂಟ್‌ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಹೇಳಲಾಗಿದೆ.