ಮೊಹಾಲಿ(ಫೆ.18): ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಕ್ರೀಡಾಂಗಣದ ವಿವಿಧ ಭಾಗಗಳಲ್ಲಿ ಇರಿಸಲಾಗಿದ್ದ ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ಭಾನುವಾರ ತೆರವುಗೊಳಿಸಲಾಯಿತು. ಪಾಕಿಸ್ತಾನಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಈ ರೀತಿ ನಮನ ಸಲ್ಲಿಸಲು ಸಂಸ್ಥೆ ನಿರ್ಧರಿಸಿತು ಎಂದು ಭಾನುವಾರ ಸಭೆ ಬಳಿಕ ಪಿಸಿಎ ಖಜಾಂಚಿ ಅಜಯ್‌ ತ್ಯಾಗಿ ಹೇಳಿದರು.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

ಪಿಸಿಎ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಫೋಟೋಗಳನ್ನ ಹಾಕಲಾಗಿದೆ. ಇದರಲ್ಲಿ ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌, ವಾಸಿಂ ಅಕ್ರಂ, ಶಾಹಿದ್‌ ಅಫ್ರಿದಿ ಸೇರಿದಂತೆ 15ಕ್ಕೂ ಹೆಚ್ಚು ಆಟಗಾರರ ಫೋಟೋಗಳಿದ್ದವು ಎಂದು ತ್ಯಾಗಿ ತಿಳಿಸಿದ್ದಾರೆ. ಇದೀಗ ಪಾಕ್ ಕ್ರಿಕೆಟಿಗರ ಎಲ್ಲಾ ಫೋಟೋಗಳನ್ನ ತೆಗೆದುಹಾಕಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!

ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(CCI) ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನ ಮಾಜಿ ನಾಯಕ(ಸದ್ಯ ಪಾಕಿಸ್ತಾನ ಪ್ರಧಾನಿ) ಇಮ್ರಾನ್ ಖಾನ್ ಫೋಟೋವನ್ನ ಪರದೆಯಿಂದ ಮುಚ್ಚಲಾಗಿತ್ತು. CCI ಕ್ರಿಕೆಟ್ ಕ್ಲಬ್ ಆಗಿದ್ದರೂ ನಮಗೆ ದೇಶ ಮೊದಲು ಎಂದು ಕಾರ್ಯದರ್ಶಿ ಸುರೇಶ್ ಭಾಫ್ನ ಹೇಳಿದ್ದರು.