ಇಸ್ಲಾಮಾಬಾದ್(ಮೇ.02): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಯಸ್ಸು ಎಷ್ಟು?  ಈ ಪ್ರಶ್ನೆ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವರ್ಷದಿಂದ ಇದುವರೆಗೂ ಎಲ್ಲರನ್ನೂ ಕಾಡ್ತಿದೆ. ಅಫ್ರಿದಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ನಿಜ ವಯಸ್ಸು ಎಷ್ಟು ಅನ್ನೋ ಕುತೂಹಲ ಹಾಗೇ ಉಳಿದಿತ್ತು. ಇದೀಗ ಸ್ವತಃ ಶಾಹಿದ್ ಅಫ್ರಿದಿ ನಿಜ ವಯಸ್ಸು ಬಹಿರಂಗ ಮಾಡಿದ್ದಾರೆ.

ಇದನ್ನೂ ಓದಿ: ಮಸೂದ್‌ಗೆ ಜಾಗತಿಕ ಉಗ್ರಪಟ್ಟ- ರಾಜತಾಂತ್ರಿಕ ಗೆಲುವಿನಲ್ಲಿದೆ ಧೋನಿ ಪಾತ್ರ!

ಶಾಹಿದ್ ಆಫ್ರಿದಿಯ ಗೇಮ್ ಚೆಂಜರ್ ಅನ್ನೋ ಆತ್ಮಚರಿತ್ರೆಯಲ್ಲಿ ನಿಜ ವಯಸ್ಸು ಎಷ್ಟು ಅನ್ನೋದನ್ನ ಹೇಳಿದ್ದಾರೆ. ಶಾಹಿದ್ ಅಫ್ರಿದಿ ಹುಟ್ಟಿದ್ದ 1980ರಲ್ಲಿ ಅಲ್ಲ, 1975 ಕರೆಕ್ಟ್. 1996ರಲ್ಲಿ ಆಫ್ರಿದಿ, ಶ್ರೀಲಂಕಾ ವಿರುದ್ದ 37 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಾಗ ಅಫ್ರಿದಿ ವಯಸ್ಸು 16 ಅಲ್ಲ, 21. 

ಇದನ್ನೂ ಓದಿ: ಬಿಡುವಿಲ್ಲದ ಕ್ರಿಕೆಟ್: ಭಾರತ- ವಿಂಡೀಸ್ ಸರಣಿ ಮುಂದೂಡಿಕೆ!

ನನ್ನ ಡೇಟ್ ಆಫ್ ಬರ್ತ್ ನಮೂದಿಸುವಾಗ ಅಧಿಕಾರಿಗಳು ತಪ್ಪಾಗಿ ಬರೆದಿದ್ದಾರೆ. ಹೀಗಾಗಿ ವಯಸ್ಸು ಕಡಿಮೆಯಾಗಿದೆ ಎಂದು ಆತ್ಮಚರಿತ್ರೆಯಲ್ಲಿ ಅಫ್ರಿದಿ ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ವಯಸ್ಸು ಬದಲಾವಣೆ ಮಾಡೋದು ಹೆಚ್ಚಾಗುತ್ತಿದೆ. ಇದು ಅತೀ ದೊಡ್ಡ ಅಪರಾಧ ಕೂಡ ಹೌದು. ವರ್ಷಗಳ ಹಿಂದಿನ MCC ಕ್ರಿಕೆಟ್ ಉಪನ್ಯಾಸದಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಈ ಕುರಿತು ಮಾತನಾಡಿದ್ದರು. ಇಷ್ಟಾದರೂ ಬಹುತೇಕ ಎಲ್ಲಾ ದೇಶದ ಕ್ರಿಕೆಟಿಗರು ವಯಸ್ಸು ಬದಲಾವಣೆ ಮಾಡಿದ್ದಾರೆ, ಮಾಡುತ್ತಿದ್ದಾರೆ.