ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರು ಬಳಿಕ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಆಡಲಿದ್ದಾರೆ. ಸತತ ಕ್ರಿಕೆಟ್ ಸರಣಿಯಿಂದಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ನವದೆಹಲಿ(ಮೇ.02): ಐಪಿಎಲ್ ಟೂರ್ನಿ, ವಿಶ್ವಕಪ್ ಟೂರ್ನಿಯಿಂದಾಗಿ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ದ್ವಿಪಕ್ಷೀಯ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಭಾರತ ಕ್ರಿಕೆಟ್ ತಂಡದ ವೆಸ್ಟ್‌ಇಂಡೀಸ್ ಪ್ರವಾಸವನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಬಿಸಿಸಿಐ ಆಡಳಿತ ಸಮಿತಿ ವಿರುದ್ಧ ಲಕ್ಷ್ಮಣ್ ಗರಂ!
ಈ ಮೊದಲು ನಿಗದಿಯಾಗಿದ್ದ ವೇಳಾಪಟ್ಟಿಪ್ರಕಾರ ಐಸಿಸಿ ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ವಿಂಡೀಸ್‌ಗೆ ಪ್ರಯಾಣಿಸಬೇಕಿತ್ತು. ಆದರೆ ಭಾರತೀಯ ಆಟಗಾರರಿಗೆ ಕೆಲ ದಿನಗಳ ವಿಶ್ರಾಂತಿ ಅಗತ್ಯವಿರುವ ಕಾರಣ, ಬಿಸಿಸಿಐ ಕೋರಿಕೆ ಮೇರೆಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಸರಣಿಯನ್ನು ಮುಂದೂಡಲು ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ಪತ್ನಿ ಅರೆಸ್ಟ್- ಹಸೀನಾ ಜಹಾನ್ ಬದುಕಲ್ಲಿ ಹೊಸ ಟ್ವಿಸ್ಟ್!
ಭಾರತ, ವಿಂಡೀಸ್ ವಿರುದ್ಧ 2 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಆಗಸ್ಟ್ ಮೊದಲ ವಾರದಿಂದ ಸೆ.4ರ ವರೆಗೂ ಸರಣಿ ನಡೆಯಲಿದೆ. ಈ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗರು ವಿಶ್ವಕಪ್ ಟೂರ್ನಿ ಬಳಿಕ ಕೆಲ ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.
