ದೋಹಾ(ಕತಾರ್)ಅ.01):  ವಿಶ್ವ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ ಜಾವೆಲಿನ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದ ಅನ್ನು ರಾಣಿ ಫೈನಲ್‌ ಪ್ರವೇ​ಶಿ​ಸಿ​ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಜಾವೆಲಿನ್‌ ಪಟು ಎನ್ನುವ ಹೆಗ್ಗಳಿಕೆಗೆ ಅನ್ನು ರಾಣಿ ಪಾತ್ರರಾಗಿದ್ದಾರೆ. 

ಇದನ್ನೂ ಓದಿ: ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!

62.43 ಮೀ. ದೂರ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿ​ದಿ​ದ್ದಾರೆ. ಮಹಿ​ಳೆ​ಯರ ಅರ್ಹತಾ ಸುತ್ತಿ​ನಲ್ಲಿ 62.43 ಮೀ. ದೂರ ಜಾವೆ​ಲಿನ್‌ ಎಸೆ​ದು ರಾಷ್ಟ್ರೀಯ ದಾಖಲೆ ಬರೆ​ದರು. ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಸೋಮ​ವಾರ ತಮ್ಮ 2ನೇ ಪ್ರಯ​ತ್ನ​ದಲ್ಲಿ ಅನ್ನು ದಾಖಲೆ ಬರೆ​ದಿ​ದ್ದರು. 

ಇದನ್ನೂ ಓದಿ: ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್‌

ಮೊದಲ ಯತ್ನ​ದಲ್ಲಿ 57.05 ಮೀ. ಎಸೆ​ದ​ರೆ, 2ನೇ ಯತ್ನ​ದಲ್ಲಿ ಸುಧಾ​ರಿ​ಸಿ​ದರು. 3ನೇ ಪ್ರಯ​ತ್ನ​ದಲ್ಲಿ ಮತ್ತೆ 60.5 ಮೀ. ದೂರ ಎಸೆ​ದಿ​ದ್ದ​ರು. ಈ ಹಿಂದಿನ ರಾಷ್ಟ್ರೀಯ ದಾಖ​ಲೆ​ 62.34 ಮೀ. ಆ​ಗಿತ್ತು.