ವಿಶ್ವ ಅಥ್ಲೆಟಿಕ್ಸ್ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್
ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂಚ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿಯಾಗಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ ಆಹ್ವಾನದ ಮೇರೆಗೆ ದ್ಯುತಿ ಚಾಂದ್ ಭಾಗವಹಿಸಲು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಸೆ.13): ದೋಹಾ ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ದ್ಯುತಿ ಚಾಂದ್ ಸ್ಪರ್ಧಿಸಲಿದ್ದಾರೆ. ಸೆ.27ರಿಂದ ಅ.6ರ ತನಕ ದೋಹಾ ವಿಶ್ವ ಚಾಂಪಿಯನ್ಶಿಪ್ ನಡೆಯಲಿದ್ದು, ದ್ಯುತಿ ಭಾರತ ತಂಡ ಸೇರಿಕೊಂಡಿದ್ದಾರೆ.
ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್
ವಿಶ್ವ ಯೂನಿವರ್ಸಿಟಿ ಗೇಮ್ಸ್‌ನ 100 ಮೀ. ಚಾಂಪಿಯನ್ ದ್ಯುತಿರನ್ನು ದೋಹಾ ವಿಶ್ವ ಅಥ್ಲೆಟಿಕ್ಸ್ನಲ್ಲಿ ಸ್ಪರ್ಧಿಸುವಂತೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್) ಆಹ್ವಾನಿಸಿತ್ತು. ಸೆಪ್ಟೆಂಬರ್ 09ರಂದು ಭಾರತೀಯ ಅಥ್ಲೇಟಿಕ್ಸ್ ಸಂಸ್ಥೆ ದೋಹಾದಲ್ಲಿ ನಡೆಯಲಿರುವ ಕೂಟಕ್ಕೆ 25 ಭಾರತೀಯ ಆಟಗಾರರ ಹೆಸರನ್ನು ಅಂತಿಮಗೊಳಿಸಿತ್ತು.
ನನ್ನ ಬಯೋಪಿಕ್‌ನಲ್ಲಿ ಕಂಗನಾ ನಟಿಸಲಿ: ದ್ಯುತಿ ಚಾಂದ್
ವಿಶ್ವ ಅಥ್ಲೆಟಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ದ್ಯುತಿ ವಿಫಲವಾಗಿದ್ದರೂ ದೋಹಾದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ದ್ಯುತಿ ಅರ್ಹತೆಗಿಟ್ಟಿಸಿಕೊಳ್ಳಲು 11.24 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಬೇಕಿತ್ತು. ಆದರೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.