ಹೈದರಾಬಾದ್(ಮೇ.13): 12ನೇ ಆವೃತ್ತಿ ಐಪಿಎಲ್ ಟೂರ್ನಿ ಮುಕ್ತಾಯವಾಗಿದೆ. ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. 1 ರನ್‌ಗಳಿಂದ ಪಂದ್ಯ ಗೆದ್ದ ರೋಹಿತ್ ಶರ್ಮಾ ಇತಿಹಾಸ ಬರೆದರು. ಪಂದ್ಯದ ಬಳಿಕ ಐಪಿಎಲ್ ಪ್ರಶಸ್ತಿ ವಿತರಿಸಲಾಯಿತು. 

ಇದನ್ನೂ ಓದಿ: ಕೆಟ್ಟ ತೀರ್ಪು: ಹುಟ್ಟುಹಬ್ಬದಂದೇ ಪೊಲಾರ್ಡ್’ಗೆ ದಂಡ..!

ಸರಣಿಯಲ್ಲಿ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗನಿಗೆ ಆರೇಂಜ್ ಕ್ಯಾಪ್, ಗರಿಷ್ಠ ವಿಕೆಟ್ ಟೇಕರ್‌ಗೆ ಪರ್ಪಲ್ ಕ್ಯಾಪ್, ಉದಯೋನ್ಮುಖ ಆಟಗಾರ ಸೇರಿದಂತೆ ಹಲವು ಪ್ರಶಸ್ತಿ ವಿತರಿಸಲಾಯಿತು. ಇಲ್ಲಿದೆ ಪ್ರಶಸ್ತಿ ವಿಜೇತರ ಕಂಪ್ಲೀಟ್ ಲಿಸ್ಟ್.

ಇದನ್ನೂ ಓದಿ: IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

IPL 2019-ಪ್ರಶಸ್ತಿ ವಿಜೇತರು:

ಆರೇಂಜ್ ಕ್ಯಾಪ್: ಡೇವಿಡ್ ವಾರ್ನರ್ (692 ರನ್)
ಪರ್ಪಲ್ ಕ್ಯಾಪ್: ಇಮ್ರಾನ್ ತಾಹೀರ್ (26 ವಿಕೆಟ್)

ಉದಯೋನ್ಮುಖ ಆಟಗಾರ: ಶುಭಮನ್ ಗಿಲ್
ವೇಗದ ಅರ್ಧಶತಕ: ಹಾರ್ದಿಕ್ ಪಾಂಡ್ಯ
ಪರ್ಫೆಕ್ಟ್ ಕ್ಯಾಚ್ : ಕೀರನ್ ಪೊಲಾರ್ಡ್
ಸೂಪರ್ ಸ್ಟ್ರೈಕ್ : ಆ್ಯಂಡ್ರೆ ರಸೆಲ್
ಫೇರ್ ಪ್ಲೇ : ಸನ್‌ರೈಸರ್ಸ್ ಹೈದರಾಬಾದ್
ಗೇಮ್ ಚೇಂಜರ್: ರಾಹುಲ್ ಚಹಾರ್
ಮೌಲ್ಯಯುತ ಆಟಗಾರ: ಆ್ಯಂಡ್ರೆ ರೆಸೆಲ್