ಹೈದರಾಬಾದ್[ಮೇ.13]: ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ತಮ್ಮ ಅಮೋಘ ಪ್ರದರ್ಶನದ ನೆರವಿನಿಂದ ಕೀರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಗಿದ್ದರು. ಇದರ ನಡುವೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಪೊಲಾರ್ಡ್’ಗೆ ಪಂದ್ಯದ ಸಂಭಾವನೆಯ 25% ದಂಡ ವಿಧಿಸಲಾಗಿದೆ.

IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

ಇಲ್ಲಿನ ರಾಜೀವ್ ಗಾಂಧಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪೊಲಾರ್ಡ್ ಅಜೇಯ 41 ರನ್ ಸಿಡಿಸಿದ್ದರು. ಹುಟ್ಟುಹಬ್ಬದ ದಿನವೇ ಮುಂಬೈಗೆ ಬ್ಯಾಟಿಂಗ್’ನಲ್ಲಿ ನೆರವಾದರಾದರೂ ಪಂದ್ಯದ ಕೊನೆಯ ಓವರ್’ನಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ದಂಡ ತೆತ್ತಿದ್ದಾರೆ. 

IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಅಷ್ಟಕ್ಕೂ ಆಗಿದ್ದೇನು?: ಚೆನ್ನೈ ಪರ 20 ಓವರ್’ನಲ್ಲಿ ದಾಳಿಗಿಳಿದ ಡ್ವೇನ್ ಬ್ರಾವೋ ಸತತ ಎರಡು ಎಸೆತಗಳು ವೈಡ್ ಗೆರೆಯಾಚೆ ಹೋದರೂ ಅಂಪೈರ್’ನಿಂದ ಲೀಗಲ್ ಎಂದು ತೀರ್ಪಿತ್ತರು. ಅಂಪೈರ್ ನಿತಿನ್ ಮೆನನ್ ತೀರ್ಪಿಗೆ ಅಸಮ್ಮತಿ ಸೂಚಿಸಿದ ಪೊಲಾರ್ಡ್ ನಾಲ್ಕನೇ ಎಸೆತ ಹಾಕುವ ಮುನ್ನ ವೈಡ್ ಗೆರೆ ಬಳಿ ಹೋಗಿ ನಿಂತರು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್’ಗಳಾದ ಮೆನನ್ ಹಾಗೂ ಇಯಾನ್ ಗೋಲ್ಡ್ ಸಾಮಾನ್ಯ ರೀತಿಯಲ್ಲೇ ನಿಂತು ಆಡುವಂತೆ ಸೂಚಿಸಿದರು. ಈ ವೇಳೆ ಪೊಲಾರ್ಡ್ ಹಾಗೂ ಅಂಪೈರ್’ಗಳ ನಡುವೆ ಮಾತಿನ ಚಕಮಕಿ ನಡೆಯಿತು. 

ಹೀಗಿತ್ತು ನೋಡಿ ಆ ಕ್ಷಣ:

ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 149 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೇವಲ 148 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇವಲ ಒಂದು ರನ್’ನಿಂದ ಕಪ್ ಕೈಚೆಲ್ಲಿತು.