ಮೆಲ್ಬರ್ನ್‌[ಜ.19]: ಭಾರತೀಯ ಕ್ರಿಕೆಟ್‌ಗೆ ಎಂ.ಎಸ್‌.ಧೋನಿಯಷ್ಟು ಬದ್ಧರಾಗಿ ಮತ್ತ್ಯಾವ ಆಟಗಾರನೂ ಇಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. 

ಧೋನಿ ಅರ್ಧಶತಕ: ಸಚಿನ್ ಸಾಧನೆ ಸಾಲಿನಲ್ಲಿ ಮಾಜಿ ನಾಯಕ

‘ಹೊರಗೆ ಜನ ಸಾಕಷ್ಟು ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ, ಟೀಕಿಸುತ್ತಾರೆ. ಆದರೆ ಧೋನಿ ಎಷ್ಟು ಬದ್ಧತೆ ಹೊಂದಿದ್ದಾರೆ ಎನ್ನುವುದು ನಮಗೆ ಮಾತ್ರ ಗೊತ್ತು’ ಎಂದು ಕೊಹ್ಲಿ ಹೇಳಿದ್ದಾರೆ. 
‘ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಯ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ, ಧೋನಿ ತಂಡಕ್ಕಾಗಿ ಶ್ರಮಿಸುವುದನ್ನು ನಿಲ್ಲಿಸಿಲ್ಲ. ಅವರು ಲಯಕ್ಕೆ ಮರಳಿರುವುದು ನಮ್ಮೆಲ್ಲರಿಗೂ ಸಂತಸ ನೀಡಿದೆ’ ಎಂದು ಆಸ್ಪ್ರೇಲಿಯಾ ವಿರುದ್ಧ ಸರಣಿಯಲ್ಲಿ ಮಾಜಿ ನಾಯಕ ಪ್ರದರ್ಶನವನ್ನು ಕೊಹ್ಲಿ ಕೊಂಡಾಡಿದ್ದಾರೆ.

3ನೇ ಏಕದಿನದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!

ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿರುವ ಧೋನಿ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಅರ್ಧಶತಕ ಸಿಡಿಸುವ ಮೂಲಕ ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾದರು. ಆಸ್ಟ್ರೇಲಿಯಾ ವಿರುದ್ಧ ಆಸಿಸ್ ನೆಲದಲ್ಲಿ ಇದೇ ಮೊದಲ ಬಾರಿಗೆ ಭಾರತ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿದೆ.