ಧೋನಿ ಅರ್ಧಶತಕ: ಸಚಿನ್ ಸಾಧನೆ ಸಾಲಿನಲ್ಲಿ ಮಾಜಿ ನಾಯಕ
ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ಎಂ.ಎಸ್.ಧೋನಿ ಇದೀಗ ಸತತ 3ನೇ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಧೋನಿ ಬರೆದ ದಾಖಲೆ ಏನು? ಇಲ್ಲಿದೆ ವಿವರ.
ಮೆಲ್ಬರ್ನ್(ಜ.18): ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಸತತ 3ನೇ ಆರ್ಧಶತಕ ಸಿಡಿಸಿದ ಮಹೀಂದ್ರ ಸಿಂಗ್ ಧೋನಿ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಹಾಫ್ ಸೆಂಚುರಿ ಜೊತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಚೆಹಲ್ ದಾಳಿಗೆ ಆಸಿಸ್ ತತ್ತರ; ಅಲ್ಪ ಮೊತ್ತಕ್ಕೆ ಆಲೌಟ್
ಆಸ್ಟ್ರೇಲಿಯಾದಲ್ಲಿ 1ಸಾವಿರ ರನ್ ಪೂರೈಸಿದ ಎಂ.ಎಸ್.ಧೋನಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಧೋನಿಗೆ 34 ರನ್‌ಗಳ ಅವಶ್ಯಕತೆ ಇತ್ತು. ಮೆಲ್ಬರ್ನ್ ಏಕದಿನ ಪಂದ್ಯದಲ್ಲಿ ಧೋನಿ ನಿರಾಯಾಸವಾಗಿ ಅರ್ಧಶತಕ ಪೂರೈಸಿ ಸಾವಿರ ರನ್ ಸರಾದಾರ ಎನಿಸಿಕೊಂಡರು.
ಇದನ್ನೂ ಓದಿ: ರಣಜಿ ಟ್ರೋಫಿ: ಪಾಂಡೆ-ಕರುಣ್ ಭರ್ಜರಿ ಅರ್ಧಶತಕ: ಸೆಮೀಸ್’ಗೇರಿದ ಕರ್ನಾಟಕ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಇದು ಟೀಕೆಗೆ ಕಾರಣವಾಗಿತ್ತು. ಆದರೆ ರೋಹಿತ್ ಶರ್ಮಾ ಹೊರತು ಪಡಿಸಿದರೆ ಧೋನಿ ರನ್ ಕಾಣಿಕೆ ನೀಡಿದ್ದರು. ಬಳಿಕ ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.