ಬೆಂಗಳೂರು: ಭಾರತದ ಮಾಜಿ ನಾಯಕ ಕಪಿಲ್‌ ದೇವ್‌ ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತನ್ನ ಆಟಗಾರರಿಗೆ ನಿರ್ದಿಷ್ಟ ಬ್ಯಾಟಿಂಗ್‌ ಕ್ರಮಾಂಕಗಳನ್ನು ನೀಡಬಾರದು. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಕ್ರಮಾಂಕವನ್ನು ಬದಲಾಯಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ. 

2011ರ ವಿಶ್ವಕಪ್ ಸಂಭ್ರಮ: ದಿಗ್ಗಜ ಕ್ರಿಕೆಟಿಗರು ನೆನಪಿಸಿಕೊಂಡಿದ್ದು ಹೀಗೆ!

ಇಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಪಿಲ್‌, ‘ನಮ್ಮ ಕಾಲದಲ್ಲಿ ಆಟಗಾರರಿಗೆ ನಿರ್ದಿಷ್ಟ ಕ್ರಮಾಂಕಗಳನ್ನು ನೀಡುತ್ತಿದ್ದೇವೆ. ಆದರೆ ಈಗ ಆಟಗಾರರು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಗೊಂದಲ ಮಾಡಿಕೊಳ್ಳಬಾರದು’ ಎಂದರು. ಕಾರ್ಯಕ್ರಮದಲ್ಲಿ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾದ ರೋಜರ್‌ ಬಿನ್ನಿ, ಕೃಷ್ಣಮಾಚಾರಿ ಶ್ರೀಕಾಂತ್‌, ಸಯ್ಯದ್‌ ಕಿರ್ಮಾನಿ ಉಪಸ್ಥಿತರಿದ್ದರು.

ಏ.20ರೊಳಗೆ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ!

ಬಹುನಿರೀಕ್ಷಿತ 2019ನೇ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಮೇ 30ರಂದು ಇಂಗ್ಲೆಂಡ್’ನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ತಂಡವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.