2011ರ ವಿಶ್ವಕಪ್ ಟ್ರೋಫಿಗೆ 8ನೇ ವರ್ಷದ ಸಂಭ್ರಮ. ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಪ್ರತಿಯೊಬ್ಬರ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ವಿಶ್ವಕಪ್ ಗೆಲುವನ್ನು ವಿಶ್ವಕಪ್ ಹೀರೋಗಳು ನೆನಪಿಸಿಕೊಂಡಿದ್ದಾರೆ.
ಮುಂಬೈ(ಏ.02): 2019ರ ವಿಶ್ವಕಪ್ ಟೂರ್ನಿಗೆ ಇನ್ನು 8 ವಾರ ಮಾತ್ರ ಬಾಕಿ ಇದೆ. ಇದೀಗ 2011ರ ವಿಶ್ವಕಪ್ ಟೂರ್ನಿಗೆ 8 ವರ್ಷದ ಸಂಭ್ರಮ. ಎಪ್ರಿಲ್ 2, 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದ ಟೀಂ ಇಂಡಿಯಾ, 6 ವಿಕೆಟ್ ಗೆಲುವು ಸಾಧಿಸಿತ್ತು. ಬರೋಬ್ಬರಿ 28 ವರ್ಷಗಳ ಬಳಿಕ ಭಾರತ, ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು.
ಇದನ್ನೂ ಓದಿ: IPL ಆಡುತ್ತಿರುವ ಪಾಂಡ್ಯ, ರಾಹುಲ್’ಗೆ ಸಂಕಷ್ಟ..!
2011ರ ವಿಶ್ವಕಪ್ ಸವಿನೆನಪು ಪ್ರತಿಯೊಬ್ಬ ಭಾರತೀಯನಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ 2011ರ ವಿಶ್ವಕಪ್ ಟೂರ್ನಿ ಗೆಲುವನ್ನು ವಿಶ್ವಕಪ್ ಹೀರೋಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ನೆನಪಿಸಿಕೊಂಡಿದ್ದಾರೆ.
