ಮುಂಬೈ(ಏ.01): ಟೀಂ ಇಂಡಿಯಾ ಕ್ರಿಕೆಟಿಗರು ಸದ್ಯ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯರಾಗಿದ್ದಾರೆ. 2019ರ ವಿಶ್ವಕಪ್ ಆಡಲಿರುವ ಬಹುತೇಕ ಎಲ್ಲಾ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಬಿಸಿಸಿಐ 2019ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಲಿಸ್ಟ್ ಅಂತಿಮಗೊಳಸಿಲು ಕಸರತ್ತು ನಡೆಸುತ್ತಿದೆ. ಏ.20ರೊಳಗೆ 2019ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಕ್ರಿಕೆಟಿಗರ ಫುಲ್ ಲಿಸ್ಟ್ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ರೆಡಿ -ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

2019ರ ವಿಶ್ವಕಪ್ ಟೂರ್ನಿ ಆಡೋ ಟೀಂ ಇಂಡಿಯಾ ತಂಡವನ್ನು ಏಪ್ರಿಲ್ 20ರೊಳಗೆ ಪ್ರಕಟಿಸುವುದಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಆಟಗಾರರ ಪ್ರದರ್ಶನ, ಫಿಟ್ನೆಸ್ ಹಾಗೂ  ಇಂಗ್ಲೆಂಡ್ ಕಂಡೀಷನ್‌ಗೆ ತಕ್ಕ ಆಟಗಾರರನ್ನು ಆಯ್ಕೆ ಮಾಡಲಿದ್ದೇವೆ ಎಂದು ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಈ ನಾಲ್ವರಲ್ಲಿ ಆಡೋರ್ಯಾರು..?

ನಾಯಕ ವಿರಾಟ್ ಕೊಹ್ಲಿ ನೇತೃತ್ವ ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲೋ ನೆಚ್ಚಿನ  ತಂಡವಾಗಿ ಗುರತಿಸಿಕೊಂಡಿದೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 5 ರಂದು ಟೀಂ ಇಂಡಿಯಾ ಹೋರಾಟ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತ, ಸೌತ್ಆಫ್ರಿಕಾ ತಂಡವನ್ನು ಎದುರಿಸುತ್ತಿದೆ.