ಚೆನ್ನೈ[ಸೆ.27]: ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ)ಗೆ ನಿರೀಕ್ಷೆಯಂತೆಯೇ, ಬಿಸಿ​ಸಿಐ ಮಾಜಿ ಅಧ್ಯಕ್ಷ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಲಿಕ ಎನ್‌.ಶ್ರೀ​ನಿ​ವಾ​ಸನ್‌ರ ಮಗಳು ರೂಪಾ ಗುರುನಾ​ಥ್‌ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿ​ದ್ದಾರೆ. 

CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

ತಮಿ​ಳುನಾಡು ಕ್ರಿಕೆಟ್‌ಗೆ ಶ್ರೀನಿ ಪುತ್ರಿ ಅಧ್ಯಕ್ಷೆ?

ರೂಪಾ, ಐಪಿ​ಎಲ್‌ ಬೆಟ್ಟಿಂಗ್‌ ಪ್ರಕ​ರ​ಣದಲ್ಲಿ ಸಿಲುಕಿ ನಿಷೇ​ಧ​ಕ್ಕೊ​ಳ​ಗಾ​ಗಿದ್ದ ಸಿಎಸ್‌ಕೆ ಮುಖ್ಯ​ಸ್ಥ ಗುರು​ನಾಥ್‌ ಮೇಯ​ಪ್ಪನ್‌ರ ಪತ್ನಿ ಸಹ ಹೌದು. ಗುರು​ವಾರ ನಡೆದ ವಾರ್ಷಿಕ ಸಭೆಯಲ್ಲಿ ರೂಪಾ, ಅವಿ​ರೋ​ಧ​ವಾಗಿ ಆಯ್ಕೆಯಾದರು. ಬಿಸಿ​ಸಿಐನಿಂದ ಮಾನ್ಯತೆ ಹೊಂದಿ​ರುವ ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದರ ಮುಖ್ಯಸ್ಥರಾದ ಮೊದಲ ಮಹಿಳೆ ಎನ್ನುವ ದಾಖ​ಲೆಯನ್ನು ರೂಪಾ ಬರೆ​ದಿ​ದ್ದಾರೆ.

ರವಿ​ಶಾಸ್ತ್ರಿ ಬಳಿಕ ಸೌರವ್ ಗಂಗೂಲಿ ಟೀಂ ಇಂಡಿಯಾ ಕೋಚ್‌?

ಬಂಗಾಳ ಕ್ರಿಕೆಟ್ ಸಂಸ್ಥೆಗೆ ಸೌರವ್ 2ನೇ ಬಾರಿ ಅಧ್ಯಕ್ಷ:

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, 2ನೇ ಬಾರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷಗಾದಿಗೇರಿದ್ದಾರೆ. 2015ರಲ್ಲೂ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಇದೀಗ ಮತ್ತೊಮ್ಮೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಅವಿಶೇಕ್ ದಾಲ್ಮಿಯಾ ಕಾರ್ಯದರ್ಶಿಯಾಗಿದ್ದಾರೆ.