ಚೆನ್ನೈ[ಸೆ.22]: ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ಚುನಾವಣೆಗೆ ಸುಪ್ರೀಂ ಕೋರ್ಟ್‌ ಆದೇಶ ಅನುವು ಮಾಡಿದ್ದು, ಸಂಸ್ಥೆಯಲ್ಲಿ ಎನ್‌.ಶ್ರೀನಿವಾಸನ್‌ ಪ್ರಭಾವ ಮುಂದುವರಿಯುವ ನಿರೀಕ್ಷೆಯಿದೆ.

ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಇಂಡಿಯಾ ಸಿಮೆಂಟ್ಸ್‌ ಮಾಲಿಕ ಎನ್‌.ಶ್ರೀನಿವಾಸ್‌ ಪುತ್ರಿ ಹಾಗೂ ಬೆಟ್ಟಿಂಗ್‌ ಪ್ರಕರಣದ ರೂವಾರಿ ಗುರುನಾಥನ್‌ ಮೇಯಪ್ಪನ್‌ ಪತ್ನಿ ರೂಪಾ ಗುರುನಾಥ್‌ ಅವರನ್ನೇ ನೂತನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡ​ಬೇಕು ಎಂದು ಸಂಸ್ಥೆ ಪ್ರತಿ​ನಿ​ಧಿ​ಗಳು ಬಯ​ಸಿ​ದ್ದಾರೆ. ಅವ​ರಿಗೆ ಪ್ರತಿ​ಸ್ಪರ್ಧಿಯೇ ಇಲ್ಲದ ಕಾರಣ, ಸೋಮ​ವಾರ ಅವ​ರನ್ನು ಅಧ್ಯಕ್ಷೆಯನ್ನಾಗಿ ಘೋಷಿ​ಸುವ ಸಾಧ್ಯತೆ ಇದೆ. 

CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

ಒಂದೊಮ್ಮೆ ರೂಪ ಅಧ್ಯಕ್ಷ ಗಾದಿ​ಗೇ​ರಿ​ದರೆ, ಬಿಸಿ​ಸಿ​ಐನಿಂದ ಮಾನ್ಯತೆ ಹೊಂದಿ​ರುವ ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದರ ಮುಖ್ಯಸ್ಥರಾದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರ​ರಾ​ಗ​ಲಿ​ದ್ದಾರೆ.