ಕೋಲ್ಕತಾ(ಸೆ.18): ರವಿಶಾಸ್ತ್ರಿ ಗುತ್ತಿಗೆ ಮುಕ್ತಾ​ಯ​ಗೊಂಡ ಬಳಿಕ ಭಾರತ ತಂಡದ ಕೋಚ್‌ ಆಗುವ ಬಗ್ಗೆ ಯೋಚಿ​ಸು​ತ್ತೇನೆ ಎಂದು ಭಾರ​ತದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿ​ದ್ದಾರೆ. ಮಂಗ​ಳ​ವಾರ ಇಲ್ಲಿ ಖಾಸಗಿ ಕಾರ್ಯಕ್ರ​ಮ​ವೊಂದ​ರಲ್ಲಿ ಮಾತ​ನಾ​ಡಿದ ಗಂಗೂ​ಲಿ, ‘ಭಾರತ ತಂಡದ ಕೋಚ್‌ ಆಗುವ ಆಸಕ್ತಿ ಖಂಡಿ​ತ​ವಾ​ಗಿಯೂ ಇದೆ. ಆದರೆ ಒಬ್ಬ ಕೋಚ್‌ ಗುತ್ತಿಗೆ ಮುಕ್ತಾ​ಯ​ಗೊ​ಳ್ಳಲಿ, ಆ ಬಳಿಕ ಯೋಚಿ​ಸು​ತ್ತೇನೆ’ ಎಂದರು.

ಟೀಂ ಇಂಡಿಯಾ ಖ್ಯಾತ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ

ನಾನು ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದೇನೆ. ನಮ್ಮ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. 7 ವರ್ಷಗಳ ಬಳಿಕ ಮೊದಲ ಬಾರಿಗೆ ಡೆಲ್ಲಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು ಎಂದು ದಾದಾ ಹೇಳಿದ್ದಾರೆ. 

ಸೌರವ್‌ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!

ಇನ್ನು ಧೋನಿ ನಿವೃತ್ತಿಯ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗೂಲಿ, ಆಯ್ಕೆಗಾರರ ಮನಸ್ಸಿನಲ್ಲಿ ಏನಿದೆ, ಕೊಹ್ಲಿ ಏನು ಯೋಚನೆ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಎಂ.ಎಸ್. ಧೋನಿ ನಿವೃತ್ತಿ ವಿಚಾರವನ್ನು ಅವರ ಪಾಡಿಗೆ ಬಿಡುವುದೇ ಒಳ್ಳೆಯದು ಎಂದು ಹೇಳಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್ ಸೇರ್ಪಡೆಯಾದರೆ ಸಂತೋಷ ಎಂದ ಗಂಗೂಲಿ

ಮತ್ತೊಂದು ಅವಧಿಗೆ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆದಿದೆ. ವೆಸ್ಟ್ ಇಂಡೀಸ್ ಪ್ರವಾಸವನ್ನು ವಿರಾಟ್ ಪಡೆ ಸೋಲಿಲ್ಲದೇ ಸರಣಿ ಜಯಿಸಿ ತವರಿಗೆ ಮರಳಿದೆ. ಇದೀಗ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವನ್ನಾಡಲಿದೆ.