Asianet Suvarna News Asianet Suvarna News

CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

ದೇಸಿ ಲೀಗ್ ಟೂರ್ನಿಗಳ ಪೈಕಿ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿ ಅತೀ ಹೆಚ್ಚು ವೀಕ್ಷಕರು ಹಾಗೂ ಅದ್ಧೂರಿ ಹೊಂದಿದೆ. ಇತ್ತೀಚಷ್ಟೆ ತಮಿಳುನಾಡು ಟಿ20 ಲೀಗ್ ಮುಕ್ತಾಯಗೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಮ್ಯಾಚ್ ನಡಿದಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.  ಇದೀಗ ಬಿಸಿಸಿಐ ತನಿಖೆ ಆರಂಭಿಸಿದೆ.  

Tamil Nadu Premier League is under scanner for betting and fixing
Author
Bengaluru, First Published Sep 17, 2019, 10:07 AM IST

ನವ​ದೆ​ಹ​ಲಿ/ಚೆನ್ನೈ(ಸೆ.17): ಅನ​ಧಿ​ಕೃತ ಲೀಗ್‌ಗಳಲ್ಲಿ ಫಿಕ್ಸಿಂಗ್‌ ನಡೆ​ಸುತ್ತಿದ್ದ ಗುಜ​ರಾತ್‌, ಕೋಲ್ಕತಾ ಮೂಲದ ಕ್ರಿಕೆಟ್‌ ಬುಕ್ಕಿ​ಗಳು ಈಗ ಬಿಸಿ​ಸಿಐನಿಂದ ಮಾನ್ಯತೆ ಪಡೆದ ಟಿ20 ಲೀಗ್‌ಗಳಿಗೂ ಕಾಲಿ​ಟ್ಟಿದ್ದಾರೆ ಎನ್ನುವ ಆತಂಕ​ಕ್ಕಾಗಿ ಬೆಳ​ವ​ಣಿಗೆ ನಡೆ​ದಿದೆ. ಇತ್ತೀ​ಚೆಗೆ ಮುಕ್ತಾ​ಯ​ಗೊಂಡಿದ್ದ ತಮಿ​ಳು​ನಾಡು ಪ್ರೀಮಿ​ಯರ್‌ ಲೀಗ್‌ (ಟಿ​ಎನ್‌ಪಿಎಲ್‌) ಟಿ20 ಟೂರ್ನಿ​ಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆ​ದಿ​ರುವ ಅನು​ಮಾನ ಶುರು​ವಾ​ಗಿದ್ದು, ಬಿಸಿ​ಸಿಐ ತನಿಖೆ ಆರಂಭಿ​ಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಬೆಟ್ಟಿಂಗ್‌ ಪ್ರಕ​ರ​ಣದ ಬಳಿಕ ತಮಿ​ಳು​ನಾಡು ಕ್ರಿಕೆಟ್‌ಗೆ ಮತ್ತೊಂದು ಕಳಂಕ ಎದು​ರಾ​ಗಿದೆ.

ಇದನ್ನೂ ಓದಿ: ಫಿಕ್ಸಿಂಗ್‌: ಪಾಕ್‌ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆ​ಟಿ​ಗರು ಬ್ಯಾನ್‌!

ಐಪಿ​ಎಲ್‌ ಕ್ರಿಕೆ​ಟಿಗ ಸೇರಿ​ದಂತೆ ಕೆಲ ಪ್ರಥಮ ದರ್ಜೆ ಕ್ರಿಕೆ​ಟಿ​ಗರು, ಇಬ್ಬರು ಕೋಚ್‌ಗಳು ಫಿಕ್ಸಿಂಗ್‌ನಲ್ಲಿ ತೊಡ​ಗಿ​ದ್ದಾರೆ ಎನ್ನುವ ಆತಂಕ​ಕಾರಿ ಸುದ್ದಿ ಹೊರ​ಬಿ​ದ್ದಿದೆ. ಈ ಸಂಬಂಧ ಬಿಸಿ​ಸಿಐ ಭ್ರಷ್ಟಾ​ಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್‌ ಸಿಂಗ್‌ ಪ್ರತಿ​ಕ್ರಿ​ಯಿ​ಸಿದ್ದು, ‘ಕೆಲ ಆಟಗಾ​ರರು ತಮಗೆ ವಾಟ್ಸ್‌ಆ್ಯಪ್‌ ಮೂಲಕ ಕೆಲ ಅಪ​ರಿ​ಚಿತ ವ್ಯಕ್ತಿ​ಗಳು ಸಂದೇಶ ಕಳು​ಹಿ​ಸು​ತ್ತಿ​ದ್ದಾರೆ ಎಂದು ನಮಗೆ ತಿಳಿ​ಸಿ​ದ್ದಾರೆ. ಯಾರು ಆ ವ್ಯಕ್ತಿ​ಗಳು ಎಂದು ಕಂಡು ಹಿಡಿ​ಯುವ ಪ್ರಯತ್ನ ನಡೆ​ಸು​ತ್ತಿ​ದ್ದೇವೆ. ಈ ಪ್ರಕ​ರಣದಲ್ಲಿ ಯಾವುದೇ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟಿಗರಿಲ್ಲ’ ಎಂದಿ​ದ್ದಾರೆ.

ಇದನ್ನೂ ಓದಿ: ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!

ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ಈ ಪ್ರಕ​ರಣಕ್ಕೆ ಸಂಬಂಧಿ​ಸಿ​ದಂತೆ ಹೆಚ್ಚಿನ ಮಾಹಿತಿ ನೀಡಿದ್ದು, ‘ಕಳೆದ ಆವೃ​ತ್ತಿ​ಯಲ್ಲಿ ಅಂಕ​ಪ​ಟ್ಟಿ​ಯಲ್ಲಿ ಕೊನೆ 3 ಸ್ಥಾನ​ಗ​ಳ​ಲ್ಲಿದ್ದ ತಂಡ​ಗಳ ಪೈಕಿ ಒಂದು ತಂಡದ ಮೇಲೆ ಅನು​ಮಾ​ನ​ವಿದೆ. ಆ ತಂಡದ ಮಾಲೀ​ಕತ್ವ, ಆಟ​ಗಾ​ರರು ಹಾಗೂ ಕೋಚ್‌ಗಳ ಆಯ್ಕೆ ಬಗ್ಗೆಯೂ ಶಂಕೆ ವ್ಯಕ್ತ​ವಾ​ಗಿದೆ’ ಎಂದಿದ್ದಾರೆಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ.

ಬುಕ್ಕಿ​ಗ​ಳಿಗೆ ತಂಡ ಬಿಟ್ಟು​ಕೊಟ್ಟಮಾಲೀ​ಕ!
ಚೆನ್ನೈ, ಆಗ್ರಾ ಹಾಗೂ ಜೈಪುರದಲ್ಲಿ ಸರಣಿ ಸಭೆಗಳ ಬಳಿಕ ತಂಡವೊಂದರ ಮಾಲೀಕ 4 ಕೋಟಿ ಪಡೆದು ತಂಡದ ಸಂಪೂರ್ಣ ನಿರ್ವ​ಹಣೆಯನ್ನು ಬುಕ್ಕಿ​ಗ​ಳಿಗೆ ಬಿಟ್ಟು​ಕೊಟ್ಟಎನ್ನುವ ಸ್ಫೋಟ​ಕ ಮಾಹಿತಿ ಹೊರ​ಬಿ​ದ್ದಿದೆ. ಬುಕ್ಕಿ​ಗಳು ತಂಡದ ಕೋಚ್‌ ಜತೆ ಒಪ್ಪಂದ ಮಾಡಿ​ಕೊಂಡು, ಆತ​ನಿಗೆ ವಜ್ರದ ಸೆಟ್‌, 25 ಲಕ್ಷ ಹಣ ನೀಡಿ ತಮಗೆ ಬೇಕಾ​ದಂತೆ ತಂಡದ ನಿರ್ವ​ಹ​ಣೆ ನಡೆ​ಸು​ತ್ತಿ​ದ್ದರು ಎನ್ನ​ಲಾ​ಗಿದೆ. ಕೋಚ್‌ ಒಂದು ಎಸ್‌ಯುವಿ ಕಾರ್‌ ಸಹ ಕೇಳಿ​ದ್ದರು ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

ಇದನ್ನೂ ಓದಿ: ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

ಆಟ​ಗಾ​ರರ ಜತೆ ಸಂವ​ಹನ ನಡೆ​ಸುವ ವೇಳೆ ಕೋಚ್‌, ಪಂದ್ಯ​ದಲ್ಲಿ ಇಷ್ಟೇ ರನ್‌ ಗಳಿ​ಸ​ಬೇಕು. ಯಾವ ಓವರಲ್ಲಿ ಎಷ್ಟುರನ್‌ ದಾಖ​ಲಿ​ಸ​ಬೇಕು ಎನ್ನು​ವ ಸೂಚನೆ ನೀಡು​ತ್ತಿ​ದ್ದರು. ಜತೆಗೆ ಆಟ​ಗಾ​ರ​ರಿಗೆ ಫಿಕ್ಸಿಂಗ್‌ನಲ್ಲಿ ಭಾಗಿ​ಯಾ​ಗು​ವಂತೆ ಪ್ರೇರೇ​ಪಿ​ಸು​ತ್ತಿ​ದ್ದರು ಎನ್ನ​ಲಾ​ಗಿದೆ. ಕೋಚ್‌ ಜತೆ ಒಬ್ಬ ಪ್ರಥಮ ದರ್ಜೆ ಕ್ರಿಕೆ​ಟಿಗ ಸಹ ಭಾಗಿ​ಯಾ​ಗಿ​ದ್ದಾಗಿ ತಿಳಿ​ದು​ಬಂದಿದೆ.

‘ಕ​ಳಂಕಿತ ಐಪಿ​ಎಲ್‌ ತಂಡದೊಂದಿಗಿದ್ದ ಕೋಚ್‌ ಒಬ್ಬರ ಮೇಲೆ ಬಲ​ವಾದ ಅನು​ಮಾ​ನ​ವಿದೆ. ಆತ ರಣಜಿ ತಂಡ​ವೊಂದಕ್ಕೂ ಕೋಚ್‌ ಆಗಿದ್ದ. ಟಿಎನ್‌ಪಿಎಲ್‌ನಲ್ಲಿ ಫಿಕ್ಸಿಂಗ್‌ ಶಂಕೆಗೆ ಗುರಿ​ಯಾ​ಗಿ​ರುವ ತಂಡದ ಕೋಚ್‌ ಆಗಿಯೂ ಒಂದು ವರ್ಷ ಕಾರ್ಯ​ನಿ​ರ್ವ​ಹಿ​ಸಿದ್ದ’ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿ​ರು​ವು​ದಾಗಿ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ.

ಐಪಿ​ಎಲ್‌ ಆಟಗಾರನ ಮೇಲೂ ಶಂಕೆ!
ಭ್ರಷ್ಟಾ​ಚಾರ ನಿಗ್ರಹ ಘಟಕ ಕಣ್ಣಿ​ಟ್ಟಿ​ರುವ ಆಟ​ಗಾರನೊಬ್ಬ ಐಪಿ​ಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದು, ತಮಿ​ಳು​ನಾ​ಡಿನ ಹೆಸ​ರಾಂತ ರಣಜಿ ಕ್ರಿಕೆ​ಟಿಗ ಸಹ ಆಗಿ​ದ್ದಾನೆ ಎನ್ನ​ಲಾ​ಗಿದೆ. ಬುಕ್ಕಿ​ಗಳ ಜತೆ ಕೋಲ್ಕತಾದಲ್ಲಿ ಪಾರ್ಟಿಯೊಂದ​ರಲ್ಲಿ ಪಾಲ್ಗೊಂಡಿದ್ದ ಈ ಆಟ​ಗಾರ, 2019ರ ಆವೃತ್ತಿಗೂ ಮೊದಲೇ ಇತರ ಆಟ​ಗಾ​ರ​ರನ್ನು ಫಿಕ್ಸಿಂಗ್‌ನತ್ತ ಸೆಳೆ​ಯುವ ಯತ್ನ ನಡೆ​ಸಿ​ದ್ದ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ. ಮೂಲ​ಗಳ ಪ್ರಕಾರ, ಬುಕ್ಕಿ​ಗಳು ಹಾಗೂ ಫಿಕ್ಸರ್‌ಗಳೇ ತಂಡದಲ್ಲಿ ಯಾವ ಆಟ​ಗಾ​ರರು ಇರ​ಬೇಕು ಎನ್ನು​ವು​ದನ್ನು ನಿರ್ಧ​ರಿಸಿ ಹರಾ​ಜಿ​ನಲ್ಲಿ ಬಿಡ್‌ ಮಾಡಿ​ದ್ದರು ಎನ್ನ​ಲಾ​ಗಿದೆ.

Follow Us:
Download App:
  • android
  • ios