ಮೈಸೂರಿನ ಶ್ಕೆ. ಎಸ್. ಶಿಲ್ಪಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟ-2026ರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಬಾಲ್ಯದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಮೀರಿ ಅವರು ಮಾಡಿದ ಈ ಸಾಧನೆಯು, ನಾಡಿನ ಯುವಜನತೆಗೆ ಮತ್ತು ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟ-2026ರ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಮಗಳು ಶ್ಕೆ. ಎಸ್. ಶಿಲ್ಪಾ ಭಾರತ ಹಾಗೂ ಕರ್ನಾಟಕದ ಕೀರ್ತಿಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದ್ದಾರೆ.
ಸಾಮಾಜಿಕ ಸವಾಲುಗಳಿಗೆ ಸೆಡ್ಡು ಹೊಡೆದ ಶಿಲ್ಪಾ!
ಬಾಲ್ಯದಲ್ಲೇ ಎದುರಾದ ದೈಹಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಲೆಕ್ಕಿಸದೆ, ಅಚಲ ಆತ್ಮವಿಶ್ವಾಸ, ದೃಢಸಂಕಲ್ಪ ಮತ್ತು ಅವಿರತ ಪರಿಶ್ರಮದಿಂದ ಮೈದಾನಕ್ಕಿಳಿದ ಶಿಲ್ಪಾ, ಇಂದು ಇಡೀ ಕನ್ನಡಿಗರು ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರ ಈ ಹೋರಾಟದ ಮನೋಭಾವ ಮತ್ತು ಸೋಲೊಪ್ಪದ ಛಲವು ನಾಡಿನ ಕೋಟ್ಯಂತರ ಯುವಜನತೆಗೆ ಹಾಗೂ ವಿಕಲಚೇತನರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.
ಜಾಗತಿಕ ವೇದಿಕೆಯಲ್ಲಿ ಕನ್ನಡದ ಮೆರುಗು!
ಕನ್ನಡ ಮಣ್ಣಿನ ಗುಣವಾದ 'ಛಲ' ಮತ್ತು 'ಸಾಧನೆ'ಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿ, ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದಿರುವ ಮೈಸೂರಿನ ಈ ಕುವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಪದಕಗಳನ್ನು ಗೆದ್ದು ಭಾರತ ಹಾಗೂ ನಮ್ಮ ಹೆಮ್ಮೆಯ ಕರ್ನಾಟಕಕ್ಕೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಹಾರೈಸೋಣ ಎಂದು ಸಂಸದ ಬಿ.ವೈ.ವಿಜಯೇಂದ್ರ ಅವರು ಶುಭ ಹಾರೈಸಿದ್ದಾರೆ.


