ಮುಂಬೈ(ಜ.14): ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಸಂಕಷ್ಟ ಮೇಲೆ ಸಂಕಷ್ಟ ಎದುರಾಗುತ್ತಿದೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಖಾಸಿಗಿ ಟಿವಿ ಕಾರ್ಯಕ್ರಮದಲ್ಲಿ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಇಬ್ಬರನ್ನೂ ಅಮಾನತು ಮಾಡಿತು. ಇದೀಗ ಮುಂಬೈ ಪೊಲೀಸರು ಪಾಂಡ್ಯಾಗೆ ಟ್ವೀಟ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗನಿಂದ ಅನುಮಾನಾಸ್ಪದ ಬೌಲಿಂಗ್..!

ಬಿಸಿಸಿಐ ಅಮಾನತು ಮಾಡಿದ ಬೆನ್ನಲ್ಲೇ, ಜಿಲೆಟ್ ಕಂಪೆನಿ ಹಾರ್ದಿಕ್ ಪಾಂಡ್ಯ ಜೊತೆಗಿನ ಜಾಹೀರಾತು ಒಪ್ಪಂದವನ್ನ ಕಡಿತಗೊಳಿಸಿತ್ತು. ಇದೀಗ ಮುಂಬೈ ಪೊಲೀಸರು, ಮೈದಾನದಲ್ಲಿ ಹೆಚ್ಚು ರನ್ ಸಿಡಿಸಬೇಕು, ಮೈದಾನದ ಹೊರಗಡೆ ಮಹಿಳೆಯರಿಗೆ ಗೌರವ ನೀಡಿದರೆ ಅತ್ಯುತ್ತಮ ಕ್ರಿಕೆಟಿನಾಗಲು ಸಾಧ್ಯ ಎಂದು ಟ್ವೀಟ್ ಮಾಡಿದೆ.

 

 

ಇದನ್ನೂ ಓದಿ: ಮೈದಾನದಲ್ಲೇ ಕುಸಿದು ಸಾವನ್ನಪ್ಪಿದ ಕ್ರಿಕೆಟಿಗ..!

ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಟೆಸ್ಟ್ ಸರಣಿ ಅಂತ್ಯಗೊಂಡ ಬೆನ್ನಲ್ಲೇ ಪಾಂಡ್ಯ ಹಾಗೂ ರಾಹುಲ್ ಕಾರ್ಯಕ್ರಮ ಪ್ರಸಾರವಾಗಿತ್ತು. ಇದು ಭಾರತೀಯರಿಗೆ ಅಚ್ಚರಿ ನೀಡಿತ್ತು. ಮಹಿಳೆಯರು ಕುರಿತು ಈ ಕ್ರಿಕೆಟಿಗರು ನೀಡಿದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಯ್ತು. ತಕ್ಷಣವೇ ಕ್ರಮಕೈಗೊಂಡ ಬಿಸಿಸಿಐ ಇಬ್ಬರನ್ನೂ ಅಮಾನತು ಮಾಡಿತು. ಇದೀಗ ಬಿಸಿಸಿಐ ಪ್ರಕರಣದ ಕುರಿತು ತನಿಖೆ ಕೈಗೊಂಡಿದೆ.