ಪಣಜಿ(ಜ.14): ಗೋವಾ ರಣಜಿ ತಂಡದ ಮಾಜಿ ಆಟಗಾರ ರಾಜೇಶ್‌ ಘೋಡಗೆ(44), ಭಾನುವಾರ ಮಾರ್ಗೋ ಪಟ್ಟಣದ ರಾಜೇಂದ್ರ ಪ್ರಸಾದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡತ್ತಿದ್ದ ವೇಳೆ ಮೈದಾನದಲ್ಲಿಯೇ ಕುಸಿದು ಸಾವನ್ನಪ್ಪಿದ್ದಾರೆ. 

‘ರಾಜೇಶ್‌ ನಾನ್‌ ಸ್ಟ್ರೈಕರ್‌ ಬದಿಯಲ್ಲಿದ್ದಾಗ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು’ ಎಂದು ಮಾರ್ಗೋ ಕ್ರಿಕೆಟ್‌ ಕ್ಲಬ್‌ನ ಹಿರಿಯ ಸದಸ್ಯರೊಬ್ಬರು ಹೇಳಿದರು. 

ರಾಜೇಶ್‌ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಗೋವಾ ಕ್ರಿಕೆಟ್‌ ಮೂಲಗಳು ದೃಢಪಡಿಸಿವೆ. ರಾಜೇಶ್‌ 1999-2000ರಲ್ಲಿ ಗೋವಾ ರಣಜಿ ತಂಡದಲ್ಲಿದ್ದರು.