ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದೀಗ ಅಭಿಮಾನಿಗಳ ಪ್ರಶ್ನೆಗೆ ವಿವರವಾದ ಉತ್ತರ ನೀಡಿ ಗಮನಸೆಳೆದಿದ್ದಾರೆ. ಈ ವೇಳೆ ರೋಹಿತ್ ಶರ್ಮಾ, ತಮ್ಮ ಹಿಟ್ ಮ್ಯಾಟ್ ಹೆಸರಿನ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.
ಮುಂಬೈ(ಮೇ.17): ಐಪಿಎಲ್ ಟೂರ್ನಿ ಮುಗಿಸಿರು ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ಇದೀಗ ವಿಶ್ವಕಪ್ ತಯಾರಿ ಆರಂಭಿಸಿದ್ದಾರೆ. ಇದರ ನಡುವೆ ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ವೇಳೆ ರೋಹಿತ್ ನೆಚ್ಚಿನ ತಿನಿಸು ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳುಕು ಚೆಲ್ಲಿದ್ದಾರೆ.
ಇದನ್ನೂ ಓದಿ: ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!
ಅಭಿಯಾನಿ ಕೇಳಿದ ನಿಕ್ ನೇಮ್ ಪ್ರಶ್ನೆಗೆ ರೋಹಿತ್ ವಿವರವಾಗಿ ಉತ್ತರಿಸಿದ್ದಾರೆ. ಇಂಗ್ಲೀಷ್‌ನಲ್ಲಿ ರೋಹಿತ್ ಹೆಸರಿನ ಅಂತ್ಯದಲ್ಲಿ ಹಿಟ್ ಅನ್ನೋ ಸ್ಪೆಲ್ಲಿಂಗ್ ಹಿಟ್‌ಮ್ಯಾನ್ ಅನ್ನೋ ನಿಕ್ ನೇಮ್ ಬರಲು ಕಾರಣ ಎಂದಿದ್ದಾರೆ. 2013ರಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಿಬ್ಬಂದಿ ಮೊದಲ ಬಾರಿಗೆ ಹಿಟ್‌ಮ್ಯಾನ್ ಎಂದು ಕರೆದಿದ್ದಾರೆ. ಬಳಿಕ ಎಲ್ಲಾ ವೀಕ್ಷಕ ವಿವರಣೆಗಾರರಿಂದ ಮಾಧ್ಯಮಗಳು ಹಿಟ್‌ಮ್ಯಾನ್ ಹೆಸರು ಪ್ರಖ್ಯಾತಿ ಪಡೆಯಿತು ಎಂದಿದ್ದಾರೆ.
ಇದನ್ನೂ ಓದಿ: CSK, ಧೋನಿ ಅಭಿಮಾನಿಗಳ ಪಾಲಿಗಿದು ಸಿಹಿಸುದ್ದಿ..!
ಇದೇ ವೇಳೆ ರೋಹಿತ್ ತಮಗೆ ತೆಲುಗು ಭಾಷೆ ಅರ್ಥವಾಗುತ್ತೆ. ಕೆಲ ಪದಗಳನ್ನು ಮಾತನಾಡುತ್ತೇನೆ ಎಂದಿದ್ದಾರೆ. ಕಾರಣ ರೋಹಿತ್ ತಾಯಿ ಪೂರ್ಣಿಮಾ ಶರ್ಮಾ ವಿಶಾಕಪಟ್ಟಣಂ ಮೂಲದವರಾಗಿದ್ದಾರೆ. ಅಭಿಮಾನಿಗಳ ಪ್ರಶ್ನೆಯಲ್ಲಿ ರೋಹಿತ್ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
